ನ್ಯಾಯಮೂರ್ತಿಗಳ ವೇತನ ಹೆಚ್ಚಳಕ್ಕೆ ಅಸ್ತು

7

ನ್ಯಾಯಮೂರ್ತಿಗಳ ವೇತನ ಹೆಚ್ಚಳಕ್ಕೆ ಅಸ್ತು

Published:
Updated:

ನವದೆಹಲಿ : ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ ನ್ಯಾಯಮೂರ್ತಿಗಳ ವೇತನ ಹೆಚ್ಚಿಸುವ ಮಸೂದೆಗೆ ರಾಷ್ಟ್ರಪತಿ ರಮಾನಾಥ್ ಕೋವಿಂದ್‌ ಅಂಕಿತ ಹಾಕಿದ್ದಾರೆ.

ಮಸೂದೆಯ ಪ್ರಕಾರ ದೇಶದ ಮುಖ್ಯ ನ್ಯಾಯಮೂರ್ತಿ ಅವರ ವೇತನ ₹1 ಲಕ್ಷದಿಂದ ₹2.80 ಲಕ್ಷಕ್ಕೆ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ವೇತನ ₹90 ಸಾವಿರದಿಂದ ₹2.50ಕ್ಕೆ, ಹೈಕೋರ್ಟ್‌ ನ್ಯಾಯಮೂರ್ತಿಗಳ ವೇತನ ₹80 ಸಾವಿರದಿಂದ ₹2.25 ಲಕ್ಷಕ್ಕೆ ಏರಲಿದೆ.

ಏಳನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಹೆಚ್ಚಳವಾಗಿದೆ. ಈ ವೇತನ 2016ರ ಜನವರಿ 1ರಿಂದ ಅನ್ವಯವಾಗಲಿದೆ.

ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ ತಿದ್ದುಪಡಿ ಕಾಯ್ದೆ 2018 ಪ್ರಕಾರ ಮನೆ ಬಾಡಿಗೆ ಭತ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಇದು 2017ರ ಜುಲೈ 1ರಿಂದ ಅನ್ವಯವಾಗಲಿದೆ.  2016ರಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಟಿ.ಎಸ್‌ ಠಾಕೂರ್‌ ಅವರು ವೇತನ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಸುಪ್ರೀಂ ಕೋರ್ಟ್‌ನಲ್ಲಿ ಸದ್ಯ 25 ನ್ಯಾಯಮೂರ್ತಿಗಳು, 25 ಹೈಕೋರ್ಟ್‌ಗಳಲ್ಲಿ 682 ನ್ಯಾಯಮೂರ್ತಿಗಳಿದ್ದಾರೆ. ನಿವೃತ್ತರಾಗಿರುವ 2,500 ನ್ಯಾಯಮೂರ್ತಿಗಳಿಗೂ ಲಾಭವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry