‘ಕಚೇರಿಗೆ ಗೈರಾದರೆ ಒಂದು ದಿನದ ವೇತನ ಕಡಿತ’

7

‘ಕಚೇರಿಗೆ ಗೈರಾದರೆ ಒಂದು ದಿನದ ವೇತನ ಕಡಿತ’

Published:
Updated:

ಲಖನೌ : ಕಚೇರಿಗೆ ತಡವಾಗಿ ಬರುವ ಹಾಗೂ ಗೈರಾಗುವ ಕೃಷಿ ಇಲಾಖೆಯ ನೌಕರರ ಒಂದು ದಿನದ ವೇತನವನ್ನು ಕಡಿತಗೊಳಿಸಲಾಗುವುದು ಎಂದು ಕೃಷಿ ಸಚಿವ ಸೂರ್ಯ ಪ್ರತಾಪ್‌ ಶಾಹಿ ಹೇಳಿದ್ದಾರೆ.

ಕೃಷಿ ನಿರ್ದೇಶನಾಲಯ ಕಚೇರಿಗೆ ಸಚಿವರು ದಿಢೀರ್‌ ಭೇಟಿ ನೀಡಿದ್ದು, ನೌಕಕರು ಕಚೇರಿಯಲ್ಲಿರದೇ ಇರುವುದರಿಂದ ಕೆರಳಿದ ಅವರು, ‘ರಾಜ್ಯದ ಯೋಗಿ ಸರ್ಕಾರ ಉತ್ತಮ ಕೆಲಸ ಸಂಸ್ಕೃತಿಯನ್ನು ನೀಡುವ ಉದ್ದೇಶವನ್ನು ಹೊಂದಿದೆ. ಆದ್ದರಿಂದ ಈ ನಿರ್ಧಾರಕ್ಕೆ ಬರಬೇಕಾಯಿತು’ ಎಂದು ಹೇಳಿದರು.  

‘ಕೆಲವು ತಿಂಗಳ ಹಿಂದೆ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿದ್ದೆ. ಪರಿಸ್ಥಿತಿ ಸುಧಾರಿಸಬಹುದು ಎಂದುಕೊಂಡಿದ್ದೆ. ಆದರೂ, ಕೆಲವು ನೌಕರರು ಕಚೇರಿಗೆ ಗೈರಾಗಿದ್ದಾರೆ. ಇವರ ವಿವರಗಳನ್ನು ಪರಿಶೀಲಿಸಿ ಒಂದು ದಿನದ ವೇತನವನ್ನು ಕಡಿತ ಮಾಡಲಾಗುವುದು’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry