ಆಯೋಗದಿಂದ ವಿವರಣೆ ಕೋರಿದ ದೆಹಲಿ ಹೈಕೋರ್ಟ್

7
ಎಎಪಿಯ 20 ಶಾಸಕರ ಅನರ್ಹತೆ ಪ್ರಕರಣ

ಆಯೋಗದಿಂದ ವಿವರಣೆ ಕೋರಿದ ದೆಹಲಿ ಹೈಕೋರ್ಟ್

Published:
Updated:

ನವದೆಹಲಿ : ದೆಹಲಿ ವಿಧಾನಸಭೆಯ ಎಎಪಿಯ 20 ಶಾಸಕರನ್ನು ಅನರ್ಹಗೊಳಿಸಲು ಕಾರಣವೇನು ಎಂಬ ಬಗ್ಗೆ ವಿವರಣೆ ನೀಡುವಂತೆ ಚುನಾವಣಾ ಆಯೋಗಕ್ಕೆ ದೆಹಲಿ ಹೈಕೋರ್ಟ್‌ ಸೂಚಿಸಿದೆ.

ಅನರ್ಹತೆ ಪ್ರಶ್ನಿಸಿ ಎಎಪಿ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ನ ದ್ವಿಸದಸ್ಯ ಪೀಠವು ಮಂಗಳವಾರ ವಿಚಾರಣೆಗೆ ಕೈಗೆತ್ತಿಕೊಂಡಿತು.

ಈ ಕುರಿತು ಫೆಬ್ರುವರಿ 7ರ ಒಳಗಾಗಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸುವಂತೆಯೂ ಆಯೋಗಕ್ಕೆ ತಾಕೀತು ಮಾಡಿದೆ.

ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕವಾದ ಎಎಪಿಯ 20 ಶಾಸಕರನ್ನು ಅನರ್ಹಗೊಳಿಸುವಂತೆ ರಾಷ್ಟ್ರಪತಿಗೆ ತಾನು ಮಾಡಿದ ಶಿಫಾರಸನ್ನು ಆಯೋಗ ಸಮರ್ಥಿಸಿಕೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry