ವಿದೇಶಿ ಹೂಡಿಕೆ ₹ 18,000 ಕೋಟಿ

7

ವಿದೇಶಿ ಹೂಡಿಕೆ ₹ 18,000 ಕೋಟಿ

Published:
Updated:

ನವದೆಹಲಿ: ದೇಶದ ಬಂಡವಾಳ ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಜನವರಿ 26ರವರೆಗೆ ಒಟ್ಟು ₹ 18,000 ಕೋಟಿ ಹೂಡಿಕೆ ಮಾಡಲಾಗಿದೆ.

ಮೂರನೇ ತ್ರೈಮಾಸಿಕದಲ್ಲಿ ಕಂಪನಿಗಳ ಆರ್ಥಿಕ ಸಾಧನೆ ಮಾರುಕಟ್ಟೆಯ ನಿರೀಕ್ಷೆಯಂತೆಯೇ ಇದೆ. ಇದರಿಂದಾಗಿ ಹೂಡಿಕೆ ಹೆಚ್ಚಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಒಟ್ಟು ಮೊತ್ತದಲ್ಲಿ ಷೇರುಗಳ ಮೇಲೆ ₹ 11,759 ಕೋಟಿ ಮತ್ತು ಸಾಲಪತ್ರಗಳ ಮೇಲೆ ₹ 6,127 ಕೋಟಿ ಹೂಡಿಕೆಯಾಗಿದೆ.

ಡಿಸೆಂಬರ್ ತಿಂಗಳಿನಲ್ಲಿ ಬಂಡವಾಳ ಮಾರುಕಟ್ಟೆಯಿಂದ ₹ 3,500 ಕೋಟಿ ಹಿಂದಕ್ಕೆ ಪಡೆಯಲಾಗಿತ್ತು.

ವಿದೇಶಿ ಹೂಡಿಕೆದಾರರು 2017ರಲ್ಲಿ ಷೇರುಗಳು ಮತ್ತು ಸಾಲಪತ್ರಗಳಲ್ಲಿ ಒಟ್ಟಾರೆ ₹ 2 ಲಕ್ಷ ಕೋಟಿ ಬಂಡವಾಳ ತೊಡಗಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry