ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಮುಖ್ಯ ಸುತ್ತಿಗೆ ಜೈಸ್ವಾಲ್‌

7

ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಮುಖ್ಯ ಸುತ್ತಿಗೆ ಜೈಸ್ವಾಲ್‌

Published:
Updated:

ನವದೆಹಲಿ: ಶ್ರೇಯಾಂಶ್ ಜೈಸ್ವಾಲ್‌ ಮತ್ತು ಆಕರ್ಷಿ ಕಶ್ಯಪ್‌ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಂಗಳವಾರ ಮುಖ್ಯ ಸುತ್ತು ಪ್ರವೇಶಿಸಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಅರ್ಹತಾ ಸುತ್ತಿನ ಪಂದ್ಯದಲ್ಲಿ ಜೈಸ್ವಾಲ್‌ 21–17, 21–16ರಲ್ಲಿ ಕರಣ್‌ ರಾಜರಾಜನ್‌ ವಿರುದ್ಧ ಗೆದ್ದರು. ಮೊದಲ ಸುತ್ತಿನಲ್ಲಿ ಅವರು 21–10, 22–20ರಲ್ಲಿ ಅಭಿಷೇಕ್ ಎಲಿಗಾರ ಅವರನ್ನು ಮಣಿಸಿದ್ದರು. ಜೈಸ್ವಾಲ್‌ ಬುಧವಾರ ಎಚ್‌.ಎಸ್.ಪ್ರಣಯ್ ವಿರುದ್ಧ ಆಡಲಿದ್ದಾರೆ. ಕಾರ್ತಿಕೇಯನ್‌ ಗುಲ್ಶನ್‌ ಕುಮಾರ್‌ 21–17, 15–21, 21–7ರಲ್ಲಿ ಸಿರಿಲ್ ವರ್ಮಾ ಎದುರು ಗೆದ್ದಿದ್ದಾರೆ. 

ಮುಖ್ಯ ಸುತ್ತಿನಲ್ಲಿ ಅವರು ಶುಭಾಂಕರ್‌ ಡೆ ಎದುರು ಆಡಲಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಆಕರ್ಷಿ, ರಿಯಾ ಮುಖರ್ಜಿ ಮುಖ್ಯ ಸುತ್ತು ಪ್ರವೇಶಿಸಿದರು. ಆಕರ್ಷಿ 21–17, 18–21, 21–15ರಲ್ಲಿ ವರ್ಷಾಲಿ ಮೇಲೂ, ರಿಯಾ 21–11, 21–15ರಲ್ಲಿ ಇರಾ ಶರ್ಮಾ ವಿರುದ್ಧವೂ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry