ಕ್ರಿಕೆಟ್: ಹೆರಾನ್ಸ್‌ ಕ್ಲಬ್‌ಗೆ ಜಯ

7

ಕ್ರಿಕೆಟ್: ಹೆರಾನ್ಸ್‌ ಕ್ಲಬ್‌ಗೆ ಜಯ

Published:
Updated:
ಕ್ರಿಕೆಟ್: ಹೆರಾನ್ಸ್‌ ಕ್ಲಬ್‌ಗೆ ಜಯ

ಬೆಂಗಳೂರು: ಸಾದಿಕ್ ಕಿರ್ಮಾನಿ (118 ರನ್) ಮತ್ತು ಎಂ. ಕೃಷ್ಣ ಶ್ರೀವತ್ಸ (30ಕ್ಕೆ5) ಅವರ ಆಟದಿಂದ ಹೆರಾನ್ಸ್ ಕ್ಲಬ್‌ ತಂಡವು ಇಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ವತಿಯ ವೈ.ಎಸ್‌.ರಾಮಸ್ವಾಮಿ ಸ್ಮಾರಕ ಕ್ರಿಕೆಟ್ ಪಂದ್ಯದಲ್ಲಿ 205 ರನ್‌ಗಳಿಂದ ಮಲ್ಲೇಶ್ವರಂ ಜಿಮ್ಖಾನ ತಂಡದ ಎದುರು ಗೆದ್ದಿದೆ.

ಹಿರಿಯ ಕ್ರಿಕೆಟಿಗ ಸೈಯದ್‌ ಕಿರ್ಮಾನಿ ಅವರ ಮಗ ಸಾದಿಕ್ ಕಿರ್ಮಾನಿ 100 ಎಸೆತಗಳಲ್ಲಿ 16 ಬೌಂಡರಿ ಹಾಗೂ 1 ಸಿಕ್ಸರ್‌ ಸಿಡಿಸಿದರು. ಬೌಲರ್‌ ಕೃಷ್ಣ ಕೇವಲ 30 ರನ್‌ಗಳಿಗೆ ಐದು ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರು: ಹೆರಾನ್ಸ್ ಕ್ಲಬ್‌: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 354 (ವಿನೀತ್ ಮಂಜುನಾಥ್‌ 25, ಸಾದಿಕ್‌ ಕಿರ್ಮಾನಿ 118, ರೋಹಿತ್ ಗೌಡ 79, ಎಂ. ಕಾರ್ತಿಕ್‌ 61, ಅಮನ್ ರಾಜ್‌ 72ಕ್ಕೆ2). ಮಲ್ಲೇಶ್ವರಂ ಜಿಮ್ಖಾನ: 32 ಓವರ್‌ಗಳಲ್ಲಿ 149 (ಅಮನ್ ರಾಜ್‌ 36, ತುಷಾರ್‌ ಸಿಂಗ್‌ 50, ಎಂ. ಕೃಷ್ಣ ಶ್ರೀವತ್ಸ 30ಕ್ಕೆ5, ಆದಿತ್ಯ ರೈ 14ಕ್ಕೆ2). ಫಲಿತಾಂಶ: ಹೆರಾನ್ಸ್‌ ಕ್ಲಬ್‌ಗೆ 205ರನ್‌ಗಳ ಜಯ.

ಕೇಂಬ್ರಿಡ್ಜ್ ಕ್ಲಬ್‌: 43.5 ಓವರ್‌ಗಳಲ್ಲಿ 185 (ಆಯುಧ್‌ ಶರ್ಮಾ 25, ಶಿವ ರತನ್‌ 24, ಶಿವ ಕುಮಾರ್‌ 32ಕ್ಕೆ3, ರಿಶಿ ಬೋಪಣ್ಣ 31ಕ್ಕೆ3). ಫ್ರೆಂಡ್ಸ್ ಯೂನಿಯನ್ ಕ್ಲಬ್‌: 30.4 ಓವರ್‌ಗಳಲ್ಲಿ 5 ವಿಕೆಟ್‌ಗೆ 187 (ವಿನಯ್ ಎನ್‌.ಸಾಗರ್‌ 56, ಲಿಖಿತ್ ಬನ್ನೂರು 23, ಅಬ್ದುಲ್ ಲತೀಫ್‌ 65ಕ್ಕೆ2). ಫಲಿತಾಂಶ: ಫ್ರೆಂಡ್ಸ್ ಯೂನಿಯನ್ ಕ್ಲಬ್‌ಗೆ 5 ವಿಕೆಟ್‌ಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry