ವಾಂಡರರ್ಸ್‌ ಪಿಚ್‌ ಕಳಪೆ: ಘೋಷಣೆ

7

ವಾಂಡರರ್ಸ್‌ ಪಿಚ್‌ ಕಳಪೆ: ಘೋಷಣೆ

Published:
Updated:

ದುಬೈ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯ ನಡೆದ ವಾಂಡರರ್ಸ್ ಪಿಚ್ ಕಳಪೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಘೋಷಿಸಿದೆ. ರೇಟಿಂಗ್‌ನಲ್ಲಿ ಈ ಪಿಚ್‌ ಮೂರು ಪಾಯಿಂಟ್‌ಗಳನ್ನು ಕಳೆದುಕೊಂಡಿದೆ.

ಪಂದ್ಯದ ನಾಲ್ಕನೇ ದಿನ ಪಿಚ್‌ ಅಪಾಯಕಾರಿಯಾಗಿತ್ತು.

ವಿಪರೀತ  ಬೌನ್ಸ್‌ ಮತ್ತು ಲಯ ತಪ್ಪುತ್ತಿದ್ದ ಚೆಂಡಿನಿಂದಾಗಿ ಉಭಯ ತಂಡಗಳ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆಯಾಗಿತ್ತು. ಹೀಗಾಗಿ ಕೆಲ ಹೊತ್ತು ಪಂದ್ಯವನ್ನು ರದ್ದುಗೊಳಿಸಲಾಗಿತ್ತು.

ಪಂದ್ಯದ ನಂತರ ,ಮುಖ್ಯ ರೆಫರಿ ಆ್ಯಂಡಿ ಪೈಕ್ರಾಫ್ಟ್‌  ಪರಿಶೀಲನೆ ನಡೆಸಿ ಐಸಿಸಿಗೆ ವರದಿ ನೀಡಿದ್ದರು.

ಐದನೇ ದಿನ ಆಟ ಮುಂದುವರಿದಿತ್ತು. ಭಾರತ ತಂಡವು ಗೆದ್ದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry