ಅರ್ಚನಾ ಕಾಮತ್‌ಗೆ ಬೆಳ್ಳಿ

7

ಅರ್ಚನಾ ಕಾಮತ್‌ಗೆ ಬೆಳ್ಳಿ

Published:
Updated:
ಅರ್ಚನಾ ಕಾಮತ್‌ಗೆ ಬೆಳ್ಳಿ

ಬೆಂಗಳೂರು: ಕರ್ನಾಟಕದ ಅರ್ಚನಾ ಕಾಮತ್‌ ರಾಂಚಿಯಲ್ಲಿ ನಡೆದ 79ನೇ ಸೀನಿಯರ್ ರಾಷ್ಟ್ರೀಯ ಮತ್ತು ಅಂತರ ರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದುಕೊಂಡಿದ್ದಾರೆ.

ಮಹಿಳೆಯರ ಡಬಲ್ಸ್ ವಿಭಾಗದ ಫೈನಲ್‌ ಪಂದ್ಯದಲ್ಲಿ ಅರ್ಚನಾ ಹಾಗೂ ಮೌಮಾ ದಾಸ್ ಜೋಡಿ 11–6, 8–11, 11–9, 8–11, 7–11ರಲ್ಲಿ ಪಶ್ಚಿಮ ಬಂಗಾಳದ ಮೌಸಮಿ ಪಾಲ್‌ ಮತ್ತು ಕೃತ್ವಿಕಾ ಸಿನ್ಹಾ ಎದುರು ಸೋತಿದೆ.

ಸೆಮಿಫೈನಲ್‌ನಲ್ಲಿ ಅರ್ಚನಾ–ಮೌಮಾ ಜೋಡಿ 3–1ರಲ್ಲಿ ಅಹಿಕಾ ಮುಖರ್ಜಿ ಮತ್ತು ಪ್ರಿಯದರ್ಶಿನಿ ದಾಸ್ ಅವರನ್ನು ಮಣಿಸಿ ಫೈನಲ್ ತಲುಪಿತ್ತು.

ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅರ್ಚನಾ ಅವರು ಪ್ರಾಪ್ತಿ ಸೇನ್ ಎದುರು ಸೋತಿದ್ದರು.

ಶರತ್‌ಗೆ ಪ್ರಶಸ್ತಿ: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶರತ್ ಕಮಲ್‌ 4–1ರಲ್ಲಿ ಅಂಥೋಣಿ ಅಮಲರಾಜ್ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry