ಕುಬೇರನ ಪುತ್ರನಿಗೆ ₹ 30 ಲಕ್ಷ ಬೆಲೆ!

7

ಕುಬೇರನ ಪುತ್ರನಿಗೆ ₹ 30 ಲಕ್ಷ ಬೆಲೆ!

Published:
Updated:
ಕುಬೇರನ ಪುತ್ರನಿಗೆ ₹ 30 ಲಕ್ಷ ಬೆಲೆ!

ಬೆಂಗಳೂರು: ಉದ್ಯಮಿ, ಶತಕೋಟಿಗಳ ಒಡೆಯ ಕುಮಾರಮಂಗಲಂ ಬಿರ್ಲಾ ಅವರ ಪುತ್ರ ಆರ್ಯಮನ್‌  ಅವರನ್ನು ಐಪಿಎಲ್ ನ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸ್‌  ₹ 30 ಲಕ್ಷಕ್ಕೆ ಖರೀದಿಸಿದೆ.

ಆರ್ಯಮನ್‌ಗೆ ₹ 20 ಲಕ್ಷ ಮೂಲಬೆಲೆ ನಿಗದಿ ಮಾಡಲಾಗಿತ್ತು. ಮೊದಲ ಸುತ್ತಿನಲ್ಲಿ ಅವರನ್ನು ಯಾವ ಫ್ರಾಂಚೈಸಿಯೂ ಖರೀದಿಸಲಿಲ್ಲ. ಎರಡನೇ ಸುತ್ತಿನಲ್ಲಿ ರಾಜಸ್ಥಾನ್‌ ರಾಯಲ್ಸ್ ಮೂಲಬೆಲೆಗಿಂತ ಹೆಚ್ಚು ಮೊತ್ತ ನೀಡಿ ತನ್ನ ತೆಕ್ಕೆಗೆ ಸೆಳೆದು ಕೊಂಡಿತು. ಫೋಬ್ಸ್‌ ಈಚೆಗೆ ಬಿಡುಗಡೆ ಮಾಡಿದ್ದ  ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಕುಮಾರಮಂಗಲಂ ಹೆಸರು ಕೂಡ ಇತ್ತು. ಈ ಮಾಹಿತಿ ಪ್ರಕಾರ ಅವರ ಒಟ್ಟು ಆಸ್ತಿ ₹ 81,900 ಕೋಟಿ ಆಗಿತ್ತು.

ಮುಂಬೈಯಲ್ಲಿ ಕ್ರಿಕೆಟ್ ಜೀವನ ಆರಂಭಿಸಿದ ಆರ್ಯಮನ್ ಈಗ ಮಧ್ಯಪ್ರದೇಶ ರಾಜ್ಯ ತಂಡದ ಆಟಗಾರ. ಅವರು ಏಕೈಕ ಪ್ರಥಮ ದರ್ಜೆ ಪಂದ್ಯ ಆಡಿದ್ದಾರೆ. ಒಡಿಶಾ ವಿರುದ್ಧ ಕಳೆದ ವರ್ಷ ನಡೆದ ರಣಜಿ ಪಂದ್ಯದಲ್ಲಿ ಮಧ್ಯಪ್ರದೇಶದ ಇನಿಂಗ್ಸ್ ಆರಂಭಿಸಿದ ಅವರು ಎರಡು ಇನಿಂಗ್ಸ್‌ಗಳಲ್ಲಿ ತಲಾ 16 ಮತ್ತು ಆರು ರನ್ ಗಳಿಸಿದ್ದರು. ಎಡಗೈ ಬ್ಯಾಟ್ಸ್‌ಮನ್ ಆಗಿರುವ ಆರ್ಯ ಮನ್‌ ಎಡಗೈ ಸ್ಪಿನ್ನರ್ ಕೂಡ ಆಗಿದ್ದಾರೆ.

ಕಳೆದ ಬಾರಿಯ ಸಿ.ಕೆ.ನಾಯ್ಡು ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಒಡಿಶಾ ವಿರುದ್ಧದ ಪಂದ್ಯದಲ್ಲಿ 153 ರನ್‌ ಗಳಿಸಿ ಅವರು ಗಮನ ಸೆಳೆದಿದ್ದರು. ಒಟ್ಟು ಆರು ಪಂದ್ಯಗಳಲ್ಲಿ 795 ರನ್‌ ಗಳಿಸಿ ಮಿಂಚಿದ್ದರು.

‘ಇದೊಂದು ಉತ್ತಮ ಅವಕಾಶ. ತಂಡದಲ್ಲಿ ನನ್ನನ್ನು ಸೇರಿಸಲು ಮುಂದಾದ ಫ್ರಾಂಚೈಸ್‌ಗೆ ನಾನು ಋಣಿಯಾಗಿದ್ದೇನೆ. ಐಪಿಎಲ್‌ನಲ್ಲಿ ಸಾಕಷ್ಟು ಅನುಭವ ಸಿಗುವ ಭರವಸೆ ಇದೆ’ ಎಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry