ಐಪಿಎಲ್ ಎಂದರೆ ಬೆಟ್ಟಿಂಗ್‌...ಫಿಕ್ಸಿಂಗ್‌...

7

ಐಪಿಎಲ್ ಎಂದರೆ ಬೆಟ್ಟಿಂಗ್‌...ಫಿಕ್ಸಿಂಗ್‌...

Published:
Updated:

ಮುಂಬೈ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್ ಎಂದರೆ ಜನರಿಗೆ ಮೊದಲು ನೆನಪಾಗುವುದು ಬೆಟ್ಟಿಂಗ್ ಮತ್ತು ಫಿಕ್ಸಿಂಗ್. ವಿದೇಶಿ ವಿನಿಮಯ ನಿಯಮಗಳನ್ನು ಗಾಳಿಗೆ ತೂರಿರುವ ಈ ಲೀಗ್ ಕ್ರಿಕೆಟ್‌ ಬೆಳವಣಿಗೆಗಾಗಿ ಏನು ಮಾಡಿದೆ ಎಂಬುದು ಇನ್ನೂ ಉತ್ತರ ಸಿಗದ ಪ್ರಶ್ನೆ ಎಂದು ಬಾಂಬೆ ಹೈಕೋರ್ಟ್‌ ಮಂಗಳವಾರ ಅಭಿಪ್ರಾಯಪಟ್ಟಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿ ಐಪಿಎಲ್‌ನ ಹಿಂದಿನ ಅಧ್ಯಕ್ಷ ಲಲಿತ್ ಮೋದಿ ಹೂಡಿರುವ ದಾವೆಯ ವಿಚಾರಣೆಯ ಸಂದರ್ಭದಲ್ಲಿ ಎಸ್‌.ಸಿ.ಧರ್ಮಾಧಿಕಾರಿ ಮತ್ತು ಭಾರತಿ ಡಂಗ್ರೆ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

‘ಕಳೆದ ಹತ್ತು ವರ್ಷಗಳಿಂದ ಈ ಲೀಗ್ ನಡೆಯುತ್ತಿದೆ. ಇದರಿಂದ ಏನು ಪ್ರಯೋಜನ ಆಗಿದೆ ಎಂಬುದರ ವಿಶ್ಲೇಷಣೆ ಮಾಡುವ ಕಾಲ ಈಗ ಸಮೀಪಿಸಿದೆ. ನಿರಂತರವಾಗಿ ನಿಯಮ ಉಲ್ಲಂಘನೆ ಮಾಡಿರುವ ಲೀಗ್‌ಗೆ ಸಂಬಂಧಿಸಿ ಸಾಕಷ್ಟು ಆರೋಪ‍ಗಳು ಕೂಡ ಇವೆ. ಈ ಬಗ್ಗೆ ಕೇಂದ್ರ ಸರ್ಕಾರ, ಆರ್‌ಬಿಐ ಮತ್ತು ಸಂಘಟಕರು ಗಂಭೀರ ಚಿಂತನೆ ನಡೆಸಬೇಕಾಗಿದೆ’ ಎಂದು ನ್ಯಾಯಮೂರ್ತಿಗಳು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry