‘ಒವೈಸಿ ಜತೆ ಮಾತುಕತೆ ಸುಳ್ಳು’

7

‘ಒವೈಸಿ ಜತೆ ಮಾತುಕತೆ ಸುಳ್ಳು’

Published:
Updated:

ಬೆಂಗಳೂರು: ‘ಆಲ್ ಇಂಡಿಯಾ ಮಜ್ಲಿಸ್ ಇತ್ತೆಹಾದುಲ್ ಮುಸ್ಲಿಮೀನ್ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಜತೆ ಯಾವುದೇ ಮಾತುಕತೆಯೂ ನಡೆದಿಲ್ಲ. ಅವರ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಅಭಿಲಾಶೆಯೂ ಪಕ್ಷಕ್ಕೆ ಇಲ್ಲ. ಅದು ಸತ್ಯಕ್ಕೆ ದೂರವಾದ ಸಂಗತಿ’ ಎಂದು ಬಿಜೆಪಿ

ವಕ್ತಾರ ಎಸ್. ಸುರೇಶ್ ಕುಮಾರ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಬಿಜೆಪಿ ತಾರಾ ಪ್ರಚಾರಕರ ಪಟ್ಟಿ ಪಕ್ಷದ ವರಿಷ್ಠರಿಂದ ಬಂದಿಲ್ಲ. ಪಟ್ಟಿಯಲ್ಲಿ ಯಾರಿಗೆ ಯಾವ ಸ್ಥಾನ ಇದೆ ಎಂಬುದು ಈವರೆಗೂ ಗೊತ್ತಿಲ್ಲ. ಪಟ್ಟಿ ಬಿಡುಗಡೆಯಾಗದೇ ಇರುವುದರಿಂದ ತಳಮಳ ಸೃಷ್ಟಿಯಾಗಲು ಹೇಗೆ ಸಾಧ್ಯ ಎಂದೂ ಅವರು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry