ಶಾಸಕ ವರ್ತೂರು ವಿರುದ್ಧ ಪ್ರಕರಣ ದಾಖಲು

7

ಶಾಸಕ ವರ್ತೂರು ವಿರುದ್ಧ ಪ್ರಕರಣ ದಾಖಲು

Published:
Updated:
ಶಾಸಕ ವರ್ತೂರು ವಿರುದ್ಧ ಪ್ರಕರಣ ದಾಖಲು

ಕೋಲಾರ: ದಲಿತರ ಜಮೀನು ಕಬಳಿಸಿ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಶಾಸಕ ವರ್ತೂರು ಪ್ರಕಾಶ್‌ ಸೇರಿದಂತೆ ಆರು ಮಂದಿ ವಿರುದ್ಧ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಕಸಬಾ ಹೋಬಳಿ ಚಿನ್ನೇನಹಳ್ಳಿ ಗ್ರಾಮದ ಸರ್ವೆ ನಂಬರ್‌ 21ರಲ್ಲಿರುವ ಮುನಿಯಪ್ಪ ಎಂಬುವರಿಗೆ ಸೇರಿದ 1 ಎಕರೆ 30 ಗುಂಟೆ ಜಮೀನನ್ನು ಕಬಳಿಸಿರುವ ಆರೋಪ ಶಾಸಕರ ವಿರುದ್ಧ ಕೇಳಿ ಬಂದಿದೆ. ಈ ಸಂಬಂಧ ಮುನಿಯಪ್ಪ ಅವರ ಸೊಸೆ ಚನ್ನಮ್ಮ ದೂರು ದಾಖಲಿಸಿದ್ದಾರೆ.

ವರ್ತೂರು ಪ್ರಕಾಶ್‌, ಅವರ ಅಣ್ಣನ ಮಗ ವಿ.ಪಿ.ರಕ್ಷಿತ್‌, ಕೋಲಾರದ ಮುನೇಶ್ವರ ನಗರದ ವೈ.ಎಚ್‌.ದಿನೇಶ್‌ಬಾಬು, ಮುನಿಯಪ್ಪ, ಪೇಟೆಚಾಮನಹಳ್ಳಿಯ ಎನ್‌.ಸುಬ್ರಮಣಿ ಮತ್ತು ಬೆಗ್ಲಿ ಹೊಸಹಳ್ಳಿಯ ನಾಗರಾಜ್‌ ವಿರುದ್ಧ ವಂಚನೆ, ವಂಚನೆ ಉದ್ದೇಶಕ್ಕಾಗಿ ನಕಲಿ ದಾಖಲೆಪತ್ರ ಸೃಷ್ಟಿ, ಶಾಂತಿ ಕದಡುವ ಉದ್ದೇಶದಿಂದ ನಿಂದನೆ, ಅಪರಾಧ ಸಂಚು ಹಾಗೂ ದಲಿತರ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry