ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 12.5 ಹೆಚ್ಚಳ

7

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 12.5 ಹೆಚ್ಚಳ

Published:
Updated:

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರ ದೇಶ ಹಾಗೂ ಹೊರ ರಾಜ್ಯಗಳಿಗೆ 2017ರಲ್ಲಿ 2.5 ಕೋಟಿ ಮಂದಿ ಪ್ರಯಾಣಿಸಿದ್ದಾರೆ. ಹಿಂದಿನ ವರ್ಷಕ್ಕೆ (2016) ಹೋಲಿಸಿದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 12.5ರಷ್ಟು ಏರಿಕೆ ಕಂಡುಬಂದಿದೆ.

ನಿಲ್ದಾಣದ ವಾರ್ಷಿಕ ಸಾರಿಗೆ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ. ದೇಶಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 14.5ರಷ್ಟು (2.13 ಕೋಟಿ) ಹೆಚ್ಚಳವಾಗಿದ್ದು, ವಿದೇಶಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 4.7ರಷ್ಟು (30 ಲಕ್ಷ) ಏರಿಕೆಯಾಗಿದೆ. ಡಿ. 23ರಂದು ಒಂದೇ ದಿನದಲ್ಲಿ 87,815 ಮಂದಿ ಪ್ರಯಾಣಿಸಿದ್ದು, ಇದು ವರ್ಷದ ಗರಿಷ್ಠ ಸಂಖ್ಯೆಯಾಗಿದೆ. ಅಂದೇ 603 ವಿಮಾನಗಳು ಹಾರಾಟ ನಡೆಸಿವೆ.

ನಿಲ್ದಾಣದಿಂದ ಹಾರಾಟ ನಡೆಸಿದ ವಿಮಾನಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 4.3ರಷ್ಟು (1,76,797) ವಿಮಾನಗಳ ಸಂಖ್ಯೆ ಏರಿಕೆಯಾಗಿದೆ. ಜತೆಗೆ ದೇಶಿಯ ವಿಮಾನಗಳ ಸಂಖ್ಯೆ ಶೇ 4.6ರಷ್ಟು ಹಾಗೂ ವಿದೇಶಿ ವಿಮಾನಗಳ ಸಂಖ್ಯೆ ಶೇ 2.1ರಷ್ಟು ಏರಿಕೆ ಕಂಡಿದೆ. ನಿಲ್ದಾಣಕ್ಕೆ ನಿತ್ಯ ಬಂದುಹೋಗುವ ವಿಮಾನಗಳ ಸಂಖ್ಯೆ 505ಕ್ಕೆ ಹೆಚ್ಚಿದೆ.

ಕಾರ್ಗೊ ಸೇವೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 10.4ರಷ್ಟು ಹೆಚ್ಚಳವಾಗಿದೆ. ಮಾವು ಹಾಗೂ ಗುಲಾಬಿ ಹೂವನ್ನು ಅತೀ ಹೆಚ್ಚು ಸಾಗಣೆ ಮಾಡಿದ ದಕ್ಷಿಣ ಭಾರತದ ಮೊದಲ ನಿಲ್ದಾಣ ಎಂಬ ಹಿರಿಮೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry