ಗ್ರೀನ್ ಕಾರ್ಡ್ ಹಿಂಬಾಕಿ: ಆಂದೋಲನ

7

ಗ್ರೀನ್ ಕಾರ್ಡ್ ಹಿಂಬಾಕಿ: ಆಂದೋಲನ

Published:
Updated:

ವಾಷಿಂಗ್ಟನ್ : ಭಾರಿ ಪ್ರಮಾಣದಲ್ಲಿ ಗ್ರೀನ್ ಕಾರ್ಡ್ ವಿತರಣೆ ಬಾಕಿ ಇರುವ ಕುರಿತು, ಇಲ್ಲಿ ವಾಸವಾಗಿರುವ ಭಾರತೀಯರು ರಾಷ್ಟ್ರವ್ಯಾಪಿ ಆಂದೋಲನ ಆರಂಭಿಸಿದ್ದಾರೆ.

‘ಗ್ರೀನ್ ಕಾರ್ಡ್ ವಿತರಣೆ ಹಿಂಬಾಕಿ ಇರುವುದರಿಂದ ಉನ್ನತ ಕೌಶಲ ಹೊಂದಿರುವ, ಗ್ರೀನ್ ಕಾರ್ಡ್‌ಗಾಗಿ ಕಾಯುತ್ತಿರುವ ಸುಮಾರು 3 ಲಕ್ಷದಷ್ಟು ಭಾರತೀಯರಿಗೆ ತೊಂದರೆಯಾಗಿದೆ. ಸದ್ಯ ಇರುವ ಕಾನೂನಿನ ಪ್ರಕಾರ, ಭಾರತೀಯರು ಗ್ರೀನ್‌ ಕಾರ್ಡ್‌ಗಾಗಿ 25–29 ವರ್ಷ ಕಾಯಬೇಕು’ ಎಂದು ಹೊಸದಾಗಿ ಆರಂಭವಾದ GCReforms.org ಹೇಳಿದೆ.

ಶ್ವೇತಭವನವು ವಲಸೆ ಸುಧಾರಣಾ ನೀತಿಯ ದಾಖಲೆಗಳನ್ನು ಕಾಂಗ್ರೆಸ್‌ಗೆ ರವಾನಿಸಿದ ಬೆನ್ನಲ್ಲೇ ಆಂದೋಲನ ಆರಂಭವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry