11 ದೇಶಗಳ ವಲಸಿಗರ ಮೇಲಿನ ನಿಷೇಧ ತೆರವು

7

11 ದೇಶಗಳ ವಲಸಿಗರ ಮೇಲಿನ ನಿಷೇಧ ತೆರವು

Published:
Updated:

ವಾಷಿಂಗ್ಟನ್ : ಹನ್ನೊಂದು ‘ಅಪಾಯಕಾರಿ ದೇಶ’ಗಳಿಂದ ಬರುವ ವಲಸಿಗರ ಮೇಲಿನ ನಿಷೇಧ ತೆರವುಗೊಳಿಸಿರುವುದಾಗಿ ಅಮೆರಿಕ ಮಂಗಳವಾರ ಘೋಷಣೆ ಮಾಡಿದೆ. ಆದರೆ ಇದೇ ವೇಳೆ, ತನ್ನ ದೇಶಕ್ಕೆ ಪ್ರವೇಶ ಬಯಸುವವರನ್ನು ಈ ಹಿಂದಿಗಿಂತ ಹೆಚ್ಚು ಕಠಿಣ ತಪಾಸಣೆಗೆ ಒಳಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.

ಈ ದೇಶಗಳು ಯಾವುವು ಎಂಬುದನ್ನು ಹೆಸರಿಸದೇ ಇದ್ದರೂ, ಮುಸ್ಲಿಂ ಪ್ರಾಬಲ್ಯದ ಹತ್ತು ದೇಶಗಳು ಹಾಗೂ ಉತ್ತರ ಕೊರಿಯಾ ಅವುಗಳಲ್ಲಿ ಸೇರಿವೆ ಎಂದು ಅರ್ಥೈಸಲಾಗಿದೆ. ‌

ಹನ್ನೊಂದು ದೇಶಗಳ ವಲಸಿಗರ ಮೇಲೆ ಅಕ್ಟೋಬರ್‌ನಲ್ಲಿ ನಿಷೇಧ ಹೇರಲಾಗಿತ್ತು. ಇದಾದ ನಂತರ ವಲಸಿಗರ ನೀತಿಯನ್ನು ಪರಿಷ್ಕರಿಸಲಾಗಿತ್ತು.

ಈಜಿಪ್ಟ್‌, ಇರಾನ್‌, ಇರಾಕ್‌, ಲಿಬಿಯಾ, ಮಾಲಿ, ಉತ್ತರ ಕೊರಿಯಾ, ಸೊಮಾಲಿಯಾ, ದಕ್ಷಿಣ ಸುಡಾನ್, ಸುಡಾನ್, ಸಿರಿಯಾ ಮತ್ತು ಯೆಮನ್‌ ಈ ದೇಶಗಳಾಗಿವೆ ಎಂದು ವಲಸಿಗರ ಗುಂಪುಗಳು ಹೇಳಿಕೊಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry