ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಮಾರ್ಪಾಟು: ಅರಿವು ಅಗತ್ಯ

Last Updated 31 ಜನವರಿ 2018, 4:39 IST
ಅಕ್ಷರ ಗಾತ್ರ

ಮಂಗಳೂರು: ಜಿಎಸ್‌ಟಿ ಮಂಡಳಿಯು ಸಭೆ ಸೇರಿ ಮಾಡುವ ಮಾರ್ಪಾಟುಗಳನ್ನು ಮತ್ತು ಆ ಕುರಿತು ಸರ್ಕಾರ ಹೊರಡಿಸುವ ಅಧಿಸೂಚನೆಗಳನ್ನು ವ್ಯಾಪಾರಿಗಳು ಅರ್ಥ ಮಾಡಿಕೊಳ್ಳಲು ಸಲಹೆ, ಮಾರ್ಗದರ್ಶನದ ಅಗತ್ಯವಿದೆ ಎಂದು ಲೆಕ್ಕಪರಿಶೋಧಕ ನಂದಗೋಪಾಲ್‌ ಶೆಣೈ ಹೇಳಿದರು.

ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಸಭಾಂಗಣದಲ್ಲಿ ನಡೆದ ‘ಜಿಎಸ್‌ಟಿ – ಇತ್ತೀಚೆಗಿನ ವಿದ್ಯಮಾನಗಳು’ ಎಂಬ ವಿಷಯ ವಾಗಿ ಮಂಗಳವಾರ ನಡೆದ ಕಾರ್ಯಾಗಾರದಲ್ಲಿ ಅವರು ಮಾಹಿತಿ ನೀಡಿದರು. ಜಿಎಸ್‌ಟಿ ಮಂಡಳಿ ಆಗಾಗ ಸಭೆ ಸೇರಿ ಹಲವಾರು ಬದಲಾವಣೆ,  ಮಾರ್ಪಾಡುಗಳನ್ನು ಮಾಡುತ್ತಿದೆ. ದೇಶದ ತೆರಿಗೆ ಪದ್ಧತಿ ಯನ್ನು ಸುಧಾರಿಸುವ ನಿಟ್ಟಿನಲ್ಲಿ ಈ ರೀತಿಯ ಚರ್ಚೆ, ಸಂವಾದ ಮತ್ತು ವ್ಯವಸ್ಥೆಯ ಸುಧಾರಣೆ ಅತ್ಯಗತ್ಯ. ಆದರೆ ಸರ್ಕಾರವು ಈ ಕುರಿತು ಅಧಿಸೂ ಚನೆ ಹೊರಡಿಸಿದಾಗ ಅದನ್ನು ಮೂಲ ಜಿಎಸ್‌ಟಿ ಕಾಯಿದೆಯೊಡನೆ ಓದಿಕೊಳ್ಳಬೇಕಾಗುತ್ತದೆ. ಕೇವಲ ಅಧಿಸೂಚನೆಗಳನ್ನು ಓದಿಕೊಂಡರೆ ಸಾಲದು ಎಂದು ಅವರು ಸಲಹೆ ಮಾಡಿದರು.

ಇತ್ತೀಚೆಗೆ ಸಾಮಾಜಿಕ ಜಾಲತಾ ಣಗಳಲ್ಲಿ ಜಿಎಸ್‌ಟಿ ಕುರಿತು ಮಾಹಿತಿ ರೂಪದಲ್ಲಿ ಹಲವಾರು ಸಂದೇ ಶಗಳು ಹರಿದಾಡುತ್ತವೆ. ಆದರೆ ಅವುಗಳ ಮೂಲ, ಆಧಾರದ ಉಲ್ಲೇಖ ಇರುವುದಿಲ್ಲ. ಇದರಿಂದ ಜನರು ಮತ್ತಷ್ಟು ದಾರಿ ತಪ್ಪುವ ಸಂಭವ ಇರುತ್ತದೆ. ಅಲ್ಲದೆ ಈ ಕಾಯಿ ದೆಯು ಸಾಫ್ಟ್‌ವೇರ್‌ ಆಧಾರಿತ ವಾಗಿರುವುದರಿಂದ, ಯಾವುದೇ ತಪ್ಪುದಾರಿಗಳಲ್ಲಿ ತೆರಿಗೆ ವಂಚನೆ ಮಾಡುವುದು ಸಾಧ್ಯವಿಲ್ಲ. ತೆರಿಗೆ ಪಾವತಿಸಿ, ತೆರಿಗೆ ವ್ಯವಸ್ಥೆಯು ನೀಡುವ ರಿಯಾಯಿತಿಗಳ ಲಾಭ ಪಡೆದು ಕೊಳ್ಳುವುದೇ ಜಾಣ ನಡೆ ಎಂದರು.

ಕಾರ್ಯಕ್ರಮದ ಉದ್ಘಾಟನೆಯಲ್ಲಿ ಮಾತನಾಡಿದ ಕೆಸಿಸಿಐ ಅಧ್ಯಕ್ಷೆ ವತಿಕಾ ಪೈ, ‘ಹೊಸ ತೆರಿಗೆ ಪದ್ಧತಿಯಿಂದ ಅಭಿವೃದ್ಧಿಗೆ ಪೂರಕವಾಗಿರಬಹುದು. ಆದರೆ ಜನರಿಗೆ ಇನ್ನಷ್ಟು ಮಾಹಿತಿಯ ಅಗತ್ಯವಿದೆ ಎಂಬ ಕಾರಣಕ್ಕೆ ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ’ ಎಂದು ಹೇಳಿದರು.

ವೇದಿಕೆಯಲ್ಲಿ ಲೆಕ್ಕಪರಿಶೋಧ ಕರಾದ ಕೇಶವ ಬಳ್ಳುಕುರಾಯ, ಕೊಲಿನ್‌ ರಾಡ್ರಿಗಸ್‌, ಲಕ್ಷ್ಮೀ ಜಿ.ಕೆ., ಕೆಸಿಸಿಐ ಗೌರವ ಕಾರ್ಯದರ್ಶಿ ಶಶಿಧರ್‌ ಪೈ ಮಾರೂರು, ಉಪಾಧ್ಯಕ್ಷ ಪಿ.ಬಿ. ಅಬ್ದುಲ್‌ ಹಮೀದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT