₹ 70 ಸಾವಿರ ಮೌಲ್ಯದ ಜಾಕೆಟ್ ಧರಿಸಿದ ರಾಹುಲ್‌, ‘ಸೂಟ್‌ ಬೂಟ್‌’ ರಾಜಕೀಯ ಎಂದ ಬಿಜೆಪಿ

7

₹ 70 ಸಾವಿರ ಮೌಲ್ಯದ ಜಾಕೆಟ್ ಧರಿಸಿದ ರಾಹುಲ್‌, ‘ಸೂಟ್‌ ಬೂಟ್‌’ ರಾಜಕೀಯ ಎಂದ ಬಿಜೆಪಿ

Published:
Updated:
₹ 70 ಸಾವಿರ ಮೌಲ್ಯದ ಜಾಕೆಟ್ ಧರಿಸಿದ ರಾಹುಲ್‌, ‘ಸೂಟ್‌ ಬೂಟ್‌’ ರಾಜಕೀಯ ಎಂದ ಬಿಜೆಪಿ

ಮೇಘಾಲಯ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ‘ಸೂಟ್‌ ಬೂಟ್‌’ ಸರ್ಕಾರ ಎಂದು ಆರೋಪಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಇದೀಗ ಬಿಜೆಪಿ ‘ಸೂಟ್‌ ಬೂಟ್‌’ ರಾಜಕೀಯ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.

ಇಲ್ಲಿನ ಶಿಲ್ಲಾಂಗ್‌ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಹುಲ್‌ ಗಾಂಧಿ, ಅಧಿಕ ಬೆಲೆಯ ಕಪ್ಪು ಬಣ್ಣದ ಜಾಕೆಟ್‌ ಧರಿಸಿದ್ದರು. ಬ್ರಿಟಿಷ್‌ ಐಷಾರಾಮಿ ಫ್ಯಾಷನ್‌ ಬ್ರ್ಯಾಂಡ್‌ ಬರ್ಬೆರಿಯಾ ಜಾಕೆಟ್‌ ಇದಾಗಿದೆ. ಇದರ ಬೆಲೆ ₹70 ಸಾವಿರ ಆಗಿದ್ದು, ಈ ಹಿನ್ನಲೆಯಲ್ಲಿ ಬಿಜೆಪಿ ರಾಹುಲ್‌ ಗಾಂಧಿ ಬಗ್ಗೆ ವ್ಯಂಗ್ಯವಾಡಿದೆ.

‘ಮೇಘಾಲಯದ ಸೂಟ್‌ ಬೂಟ್‌ ಸರ್ಕಾರ, ಕಪ್ಪುಹಣದ ಚಲಾವಣೆ ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದೆ. ಈ ಕುರಿತು ಸರ್ಕಾರ ವರದಿಯನ್ನು ಸಲ್ಲಿಸಿ’ ಎಂದು ಮೇಘಾಲಯದ ಬಿಜೆಪಿ ಟ್ವೀಟ್‌ ಮಾಡಿದೆ.

2015ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರನ್ನು ಭೇಟಿ ಮಾಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದುಬಾರಿ ಬೆಲೆಯ ಸೂಟ್‌ ಧರಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರಾಹುಲ್‌ ಗಾಂಧಿ, ‘ಸೂಟ್‌ ಬೂಟ್‌ ಪ್ರಧಾನಿ’, ‘ದುರ್ಬಲ ಪ್ರಧಾನಿ’ ಎಂದು ವೈಯಕ್ತಿಕ ನಿಂದನೆ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry