ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದತೆಗಾಗಿ ಮಾನವ ಸರಪಳಿ

Last Updated 31 ಜನವರಿ 2018, 7:06 IST
ಅಕ್ಷರ ಗಾತ್ರ

ಕುಣಿಗಲ್: ನಾಡಿನ ಶಾಂತಿ ಸೌಹಾರ್ದದತೆಗಾಗಿ ತಾಲ್ಲೂಕಿನ ಪ್ರಗತಿಪರ ಒಕ್ಕೂಟದ ವತಿಯಿಂದ ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆಯಲಾಯಿತು. ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ್ ಪಟೇಲ್ ಮಾತನಾಡಿ, ‘ರಾಜಕಾರಣಿಗಳುತಮ್ಮ ಬೆಳೆ ಬೇಯಿಸಿಕೊಳ್ಳಲು ಜಾತಿ ಜಾತಿಗಳ ನಡುವೆ ವಿಷ ಬೀಜಬಿತ್ತಿ ಶಾಂತಿ ನೆಮ್ಮದಿಗಳನ್ನು ಹಾಳುಮಾಡುತ್ತಿದ್ದಾರೆ’ ಎಂದರು.

ಪ್ರಗತಿ ಪರ ಒಕ್ಕೂಟದ ಮುಖಂಡರುಗಳಾದ ಅಬ್ದುಲ್ ಮುನಾಫ್, ಕುಣಿಗಲ್ ಶಿವಣ್ಣ,ಜಿ.ಕೆ.ನಾಗಣ್ಣ, ಶಿವಶಂಕರ್,ನರಸಿಂಹ ಮೂರ್ತಿ, ದಲಿತ್ ನಾರಾಯಣ್, ರಾಮಲಿಂಗಯ್ಯ, ಆನಂದಮೂರ್ತಿ,ಗುಲ್ಜಾರ್, ಕ.ಚ.ಕೃಷ್ಣಪ್ಪ ಇದ್ದರು.

ಮಾನವ ಸರಪಳಿ ದಾಖಲೆ
ತಿಪಟೂರು: ಸರ್ವ ಧರ್ಮ, ಜಾತಿಗಳ ಸೌಹಾರ್ದತೆ ಸಂದೇಶ ಸಾರಲು ನಗರದಲ್ಲಿ ಸೌಹಾರ್ದ ತಿಪಟೂರು ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಂಗಳವಾರ ನಗರದಲ್ಲಿ ದಾಖಲೆ ಉದ್ದದ ಮಾನವ ಸರಪಳಿ ರಚಿಸಲಾಗಿತ್ತು.

ನಗರದ ಇತಿಹಾಸದಲ್ಲಿ ಇದೇ ಮೊದಲು ಎನ್ನುವಂತೆ ಸುಮಾರು ಒಂದು ಕಿಲೋ ಮೀಟರ್ ಅತಿ ಉದ್ದದ ಮಾವನ ಸರಪಳಿ ರಚನೆಯಾಗಿತ್ತು. ಸಿಂಗ್ರಿ ವೃತ್ತದಿಂದ ಮುಖ್ಯ ರಸ್ತೆ ಪಕ್ಕ ಕೈಕೈ ಹಿಡಿದು ಸೌಹಾರ್ದ ಸಂದೇಶ ಸಾರಿದರು. ಕೊನೆಯಲ್ಲಿ ಸಿಂಗ್ರಿ ವೃತ್ತದಲ್ಲಿ ನಡೆದ ಸಮಾವೇಶದಲ್ಲಿ ವಿವಿಧ ಮುಖಂಡರರು ಮಾತನಾಡಿದರು.

ಜನಸ್ಪಂದನ ಟ್ರಸ್ಟ್, ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ರಕ್ಷಣಾ ವೇದಿಕೆ, ರೈತ ಸಂಘ, ಲಯನೆಸ್ ಕ್ಲಬ್, ಕುರುಬರ ಸಂಘದ, ದಲಿತ ಕಾರ್ಮಿಕ ಒಕ್ಕೂಟ, ಯಾದವ ಸಮಾಜ, ದೇವಾಂಗ ಸಮಾಜ, ಕ್ರೈಸ್ತ ಸಮುದಾಯ, ಬೌದ್ಧ ಮಹಾಸಭಾ, ನಿವೃತ್ತ ನೌಕರರ ಸಂಘ, ಸವಿತಾ ಸಮಾಜ, ಭೂಮಿ ಸಾಂಸ್ಕೃತಿಕ ವೇದಿಕೆ, ಸಿಐಟಿಯು, ಡಿಎಸ್‍ಎಸ್, ಜಯ ಕರ್ನಾಟಕ, ಸೇವಾಲಾಲ್ ಲಂಬಾಣಿ ಸಂಘ, ಅನ್ಯೋನ್ಯ ಮಹಿಳಾ ಸಂಸ್ಥೆ, ಕದಳಿ ಸಂಸ್ಥೆ, ಮಾತಂಗ ಸಾಹಿತ್ಯ ಪರಿಷತ್, ಅಲೆಮಾರಿ ಬುಡಕಟ್ಟು ಮಹಾಸಭಾ, ಛಲವಾದಿ ಮಹಾಸಭಾ, ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ, ಆಟೋ ಚಾಲಕರ ಸಂಘ, ಅಂಬೇಡ್ಕರ್ ಸೇನೆ, ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತರ ಸಂಘಟನೆಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಜನಾಂಗೀಯ ಮುಖಂಡರು ಪಾಲ್ಗೊಂಡಿದ್ದರು.

ಸೌಹಾರ್ದ ತಿಪಟೂರು ಸಂಚಾಲಕ ಎನ್.ಪಿ. ನಾಗರಾಜ್ ಮಾತನಾಡಿದರು. ಸಾಹಿತಿ ಎಸ್. ಗಂಗಾಧರಯ್ಯ, ರಂಗಕರ್ಮಿ ಸತೀಶ್ ತಿಪಟೂರು, ದಲಿತ ಮುಖಂಡರಾದ ರಂಗಸ್ವಾಮಿ, ಬಜಗೂರು ಮಂಜುನಾಥ್, ನಾಗತಿಹಳ್ಳಿ ಕೃಷ್ಣಮೂರ್ತಿ, ವಿವಿಧ ಸಂಘಟನೆಗಳ ಮುಖಂಡರಾದ ಬಸಪ್ಪ, ಪ್ರಭ, ಶಿವಪ್ಪ, ಆರ್.ಡಿ. ಬಾಬು, ಭಾಗ್ಯ ಮೂರ್ತಿ, ನಾಗರಾಜ್, ಫೌಜಿಯಾ ಬೇಗಂ, ಗೋವಿಂದರಾಜು, ತಿಟಪೂರು ಕೃಷ್ಣ, ಕುಮಾರ್ ಯಾದವ್, ಅನಸೂಯಮ್ಮ, ಶೈಲ, ಸಮೀ ಉಲ್ಲಾ, ಷಫಿ ಉಲ್ಲಾ ಷರೀಫ್, ರಾಜಕೀಯ ಮುಖಂಡರಾದ ಸಿ.ಬಿ. ಶಶಿಧರ್, ಮೈಲಾರಿ ಮಾತನಾಡಿದರು. ಕಂಚಾಘಟ್ಟ ರಘು, ಮೋಹನ್ ಸಿಂಗಿ, ವಸಂತ್, ಆನಂದ್, ಚಿಕ್ಕಸ್ವಾಮಿಗೌಡ, ಚನ್ನಬಸವಣ್ಣ, ಮುತವಲ್ಲಿ ದಸ್ತಗೀರ್, ಪ್ಯಾರಾ ಜಾನ್, ಮಹಮೂದ್, ಲುಕ್ಮಾನ್, ಅಲೀಮ್ ಪಾಶಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT