ಶಾರುಕ್‌ಗೆ ಜಿಲ್ಲಾಧಿಕಾರಿಯಿಂದ ನೋಟಿಸ್‌

7

ಶಾರುಕ್‌ಗೆ ಜಿಲ್ಲಾಧಿಕಾರಿಯಿಂದ ನೋಟಿಸ್‌

Published:
Updated:
ಶಾರುಕ್‌ಗೆ ಜಿಲ್ಲಾಧಿಕಾರಿಯಿಂದ ನೋಟಿಸ್‌

ಮುಂಬೈ: ಕೃಷಿ ಚಟುವಟಿಕೆ ನಡೆಸುವುದಾಗಿ ಹೇಳಿ, ಆ ಜಾಗದಲ್ಲಿ ಫಾರ್ಮ್‌ಹೌಸ್‌ ನಿರ್ಮಾಣ ಮಾಡಿರುವ ಆರೋಪದ ಮೇಲೆ ಬಾಲಿವುಡ್‌ ನಟ ಶಾರುಕ್‌ ಖಾನ್‌ ಅವರಿಗೆ ರಾಯಗಡ ಜಿಲ್ಲಾಧಿಕಾರಿ ನೋಟಿಸ್‌ ಜಾರಿಗೊಳಿಸಿದ್ದಾರೆ.

‘ಶಾರುಕ್ ಖಾನ್‌  ಅವರು, ಇಲ್ಲಿಯ ಅಲಿಬಾಗ್‌ನಲ್ಲಿರುವ ಬಂಗಲೆಯಲ್ಲಿ ಫಾರ್ಮ್‌ಹೌಸ್‌ ನಿರ್ಮಿಸಿದ್ದಾರೆ. ದೆಜ ವು ಫಾರ್ಮ್ಸ್ ಪ್ರೈ.ಲಿ. ಎಂಬ ಹೆಸರಿನಲ್ಲಿ ನೋಂದಣಿಯಾಗಿರುವ ಈ ಫಾರ್ಮ್‌ಹೌಸ್‌ನಲ್ಲಿ ಈಜು ಕೊಳ, ಹೆಲಿಪ್ಯಾಡ್‌ ನಿರ್ಮಿಸಲಾಗಿದೆ. ಆದರೆ ಕಾನೂನು ಪ್ರಕಾರವಾಗಿ ಅಲ್ಲಿ ಅವರು ಕೇವಲ ಕೃಷಿ ಚಟುವಟಿಕೆ ನಡೆಸಬೇಕಿತ್ತು. ಆದ್ದರಿಂದ ಈ ನೋಟಿಸ್‌ ಜಾರಿ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ. ವಿಜಯ್‌ ಸೂರ್ಯವಂಶಿ ಹೇಳಿದ್ದಾರೆ.

19,500 ಚದರ ಅಡಿ ಪ್ರದೇಶದ ಈ ಫಾರ್ಮ್‌ಹೌಸ್ ಆಸ್ತಿಯ ಮೌಲ್ಯ ₹ 14.67 ಕೋಟಿ ಎಂದು ಅಂದಾಜಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry