ಕೆಎಸ್‌ಆರ್‌ಪಿ ನೇಮಕಾತಿಗೆ ಬಂದಿದ್ದ ಅಭ್ಯರ್ಥಿ ಸಾವು

7

ಕೆಎಸ್‌ಆರ್‌ಪಿ ನೇಮಕಾತಿಗೆ ಬಂದಿದ್ದ ಅಭ್ಯರ್ಥಿ ಸಾವು

Published:
Updated:
ಕೆಎಸ್‌ಆರ್‌ಪಿ ನೇಮಕಾತಿಗೆ ಬಂದಿದ್ದ ಅಭ್ಯರ್ಥಿ ಸಾವು

ಕಲಬುರ್ಗಿ: ಇಲ್ಲಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಕೆಎಸ‌್ಆರ‌್‌ಪಿ ಕಾನ್ ಸ್ಟೆಬಲ್ ಹುದ್ದೆಗೆ ನಡೆಯುತ್ತಿದ್ದ ದೈಹಿಕ ಸಹಿಷ್ಣುತೆ ಪರೀಕ್ಷೆಗೆ ಬಂದಿದ್ದ ಅಭ್ಯರ್ಥಿಯೊಬ್ಬರು ಮೃತಪಟ್ಟಿದ್ದಾರೆ.

ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕು ಮುನಳ್ಳಿಯ ವಿಕಾಸ  ಸಂಜು ಗಾಯಕವಾಡ ಮೃತಪಟ್ಟವರು. ಬೆಳಿಗ್ಗೆ ನಡೆದ ಓಟದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದು, ಹೃದಯಾಘಾತವಾಗಿರುವ ಶಂಕೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈಶಾನ್ಯ ವಲಯ ಐಜಿಪಿ ಮುರುಗನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ಭೇಟಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry