ಪಟಾಕಿ ಅವಘಡ: ಮತ್ತೊಬ್ಬ ಸಾವು

5

ಪಟಾಕಿ ಅವಘಡ: ಮತ್ತೊಬ್ಬ ಸಾವು

Published:
Updated:
ಪಟಾಕಿ ಅವಘಡ: ಮತ್ತೊಬ್ಬ ಸಾವು

ಹಂಪಾಪುರ (ಮೈಸೂರು): ಪಟಾಕಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಲ್ಲನಾಯಕ್ (60) ಎಂಬುವರು ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ಇದರಿಂದ ಸಾವಿನ ಸಂಖ್ಯೆ ಎರಡಕ್ಕೆ ಏರಿದೆ. ಇನ್ನೂ ಐದು ಗಾಯಾಳುಗಳು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟಾಕಿ ತಯಾರಕ ಹರೀಶ್ ಜ.29ರಂದು ಮೃತಪಟ್ಟಿದ್ದರು.

ಎಚ್.ಡಿ.ಕೋಟೆ ತಾಲ್ಲೂಕಿನ ಮಾದಾಪುರದಲ್ಲಿ ಜ.26ರಂದು ಸಂಭವಿಸಿದ ಅವಘಡದಲ್ಲಿ 7 ಮಂದಿ ಗಾಯಗೊಂಡಿದ್ದರು. ಗ್ರಾಮದ ಜಾತ್ರೆಗೆ ಪಟಾಕಿ ತಯಾರಿಸುತ್ತಿದ್ದ ವೇಳೆ ಸ್ಫೋಟ ಉಂಟಾಗಿತ್ತು. ಸ್ಪೋಟದ ತೀವ್ರತೆಗೆ ಕಟ್ಟಡ ನೆಲಸಮವಾಗಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry