ಭಟ್ಕಳದಲ್ಲಿ ಸೌಹಾರ್ದತೆಗಾಗಿ ಕರ್ನಾಟಕ ಅಭಿಯಾನ

7

ಭಟ್ಕಳದಲ್ಲಿ ಸೌಹಾರ್ದತೆಗಾಗಿ ಕರ್ನಾಟಕ ಅಭಿಯಾನ

Published:
Updated:

ಭಟ್ಕಳ: ಸೌಹಾರ್ದತೆಗಾಗಿ ಕರ್ನಾಟಕ ಅಭಿಯಾನದ ಅಂಗವಾಗಿ ತಾಲ್ಲೂಕಿನ ಶಿರಾಲಿ ಜನತಾ ವಿದ್ಯಾಲಯದ ಆವರಣದಲ್ಲಿ ಮಂಗಳವಾರ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿದರು.

ಜನತಾ ವಿದ್ಯಾಲಯದ ಪ್ರಾಂಶುಪಾಲ ಎ.ಬಿ ರಾಮರಥ, ಸಮಾಜ ಸೇವಕ ಡಾ.ಆರ್.ವಿ ಸರಾಫ್, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳು ಪ್ರಮುಖರು ಪಾಲ್ಗೊಂಡಿದ್ದರು.

ಕಾರ್ಮಿಕ ಸಂಘಟನೆಗಳಿಂದ ಮಾನವ ಸರಪಳಿ: ನಗರದ ರಾಷ್ಟ್ರೀಯ ಹೆದ್ದಾರಿಯಲ್ಲೂ ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ಮುಖಂಡ ಸುಭಾಷ ಕೊಪ್ಪಿಕರ್, ‘ಕೋಮುವಾದಕ್ಕೆ ಪ್ರತಿಯಾಗಿ ಸಾಮರಸ್ಯವನ್ನು, ದ್ವೇಷಕ್ಕೆ ಪ್ರತಿಯಾಗಿ ಸ್ನೇಹವನ್ನು, ಕುತಂತ್ರಕ್ಕೆ ಪ್ರತಿಯಾಗಿ ಪ್ರಮಾಣಿಕತೆಯನ್ನು ಎತ್ತಿ ಹಿಡಿಯಬೇಕಾಗಿದೆ’ ಎಂದರು.

ಪ್ರೊ.ಆರ್‌.ಎಸ್ ನಾಯಕ, ಸಿಐಟಿಯು ಕಾರ್ಯದರ್ಶಿ ಗೀತಾ ನಾಯ್ಕ, ಪುಷ್ಪಾವತಿ ನಾಯ್ಕ, ಪಂಚಾಯ್ತಿ ನೌಕರರ ಸಂಘದ ಅಧ್ಯಕ್ಷ ಗಜೇಂದ್ರ ಶಿರಾಲಿ, ಗಿರಿಜಾ ಮೊಗೇರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry