ಮೈಸೂರಿನಲ್ಲಿ ಕಾರು ಅಪಘಾತ: ಮೂವರು ಸಾವು

7

ಮೈಸೂರಿನಲ್ಲಿ ಕಾರು ಅಪಘಾತ: ಮೂವರು ಸಾವು

Published:
Updated:
ಮೈಸೂರಿನಲ್ಲಿ ಕಾರು ಅಪಘಾತ: ಮೂವರು ಸಾವು

ಮೈಸೂರು: ಇಲ್ಲಿನ ಹೊರವಲಯದ ದಟ್ಟಗಳ್ಳಿ ರಿಂಗ್‌ ರಸ್ತೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಮೊಹಮ್ಮದ್ ಫರಾನ್, ರಿಯಾನ್ ರೆಹಮಾನ್ , ದಿವ್ಯಾ ಮೃತಪಟ್ಟವರು. ಗಾಯಗೊಂಡಿರುವ ಆಸಿಂ ಮತ್ತು ಸ್ಫೂರ್ತಿ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಕೆ.ಆರ್‌.ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಸೇಂಟ್ ಜೋಸೆಫ್‌ ಕಾಲೇಜು ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.

ವಿಶ್ವಪ್ರಜ್ಞಾ ಪಿಯು ಕಾಲೇಜು ಬಳಿ ವೇಗವಾಗಿ ಬಂದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಹಲವು ಪಲ್ಟಿಯಾಗಿ ಉರುಳಿ ಬಿದ್ದಿದ್ದು, ಸಂಪೂರ್ಣ ನಜ್ಜುಗುಜ್ಜಾಗಿದೆ. ಕುವೆಂಪುನಗರ ಸಂಚಾರ ಉಪಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry