ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Hide ಮಾಡಿ ಇಲ್ಲವೇ Snooze ಮಾಡಿ

Last Updated 31 ಜನವರಿ 2018, 19:30 IST
ಅಕ್ಷರ ಗಾತ್ರ

ಫೇಸ್‍ಬುಕ್ ಓಪನ್ ಮಾಡಿದರೆ ಸಾಕು ಬರೀ ಕಿತ್ತಾಟ, ಕೆಸರೆರೆಚಾಟ, ಟ್ರೋಲ್‍ಗಳು. ಮೊದಲೆಲ್ಲಾ ಹೀಗಿರಲಿಲ್ಲ. ಒಂದಷ್ಟು ಜನ ಕತೆ, ಕವನ, ಲೇಖನಗಳನ್ನು ಬರೆಯುತ್ತಿದ್ದರು. ಅಲ್ಲೊಂದು ಸ್ನೇಹವಲಯವಿತ್ತು, ಆದರೆ ಈಗ ಹಾಗಿಲ್ಲ. ಒಬ್ಬರ ಪೋಸ್ಟಿಗೆ ಲೈಕ್, ಕಾಮೆಂಟ್ ಮಾಡಿದರೆ ಇನ್ನೊಬ್ಬರಿಗೆ ಆಗಲ್ಲ. ಎಲ್ಲದರಲ್ಲೂ ರಾಜಕೀಯ, ಕೊಂಕು ಹುಡುಕುತ್ತಾರೆ. ಇನ್ನು ಕೆಲವು ಪೋಸ್ಟ್ ಗಳು ಕಿರಿಕಿರಿ, ಅದಕ್ಕೇ ಅವರನ್ನು ಅನ್‍ಫ್ರೆಂಡ್ ಮಾಡಿದೆ ಎಂದು ಹೇಳುವವರು ಸ್ವಲ್ಪ ಗಮನಿಸಿ. ಪೋಸ್ಟ್ ಇಷ್ಟವಾಗಿಲ್ಲ ಎಂದು ಅನ್‍ಫ್ರೆಂಡ್ ಮಾಡುವ ಬದಲು ಅಂಥ ಪೋಸ್ಟ್‌ಗಳು ನಮಗೆ ಕಾಣಿಸದಂತೆ ಮಾಡುವ ಸೆಟ್ಟಿಂಗ್ ಕೂಡ ಫೇಸ್‍ಬುಕ್‍ನಲ್ಲಿದೆ.

ನಮಗೆ ಇಷ್ಟವಾದ ಪೋಸ್ಟ್‌ಗಳನ್ನು ಲೈಕ್, ಕಾಮೆಂಟ್ ಮಾಡಲು ಫೇಸ್‍ಬುಕ್‌ನಲ್ಲಿ ಅವಕಾಶವಿರು ವಂತೆಯೇ ಇಷ್ಟವಿಲ್ಲದ ಪೋಸ್ಟ್‌ಗಳನ್ನು ಮರೆಮಾಡಬಹುದು. ನಮ್ಮ ಫ್ರೆಂಡ್ ಲಿಸ್ಟ್‌ನಲ್ಲಿರುವ ವ್ಯಕ್ತಿಗಳು ಪೋಸ್ಟ್ ಮಾಡಿದ ಫೋಟೊ ಅಥವಾ ಬರಹ ಇಷ್ಟವಾಗಿಲ್ಲ ಅಂತಿಟ್ಟುಕೊಳ್ಳಿ. ಅದು ನಮ್ಮ ನ್ಯೂಸ್ ಫೀಡ್ ನಲ್ಲಿ ಕಾಣಿಸುವುದೇ ಬೇಡ ಎಂದಾದರೆ Hide post ಎಂಬ ಆಪ್ಶನ್ ಕ್ಲಿಕ್ ಮಾಡಿದರೆ ಸಾಕು. ನಮ್ಮ ಸ್ನೇಹಿತರೇ ಆಗಿದ್ದರೂ ಅವರ ಪೋಸ್ಟ್‌ಗಳಿಂದ ದೂರವೇ ಇರೋಣ ಎಂದೆನಿಸಿದರೆ ಒಂದು ತಿಂಗಳು ಅವರ ಯಾವುದೇ ಪೋಸ್ಟ್‌ಗಳು ನಮಗೆ ಕಾಣಿಸದಂತೆ ಮಾಡುವ Snooze ಸೆಟ್ಟಿಂಗ್ ಕೂಡ ಇಲ್ಲಿದೆ.

ಆಪ್ಶನ್ ಎಲ್ಲಿದೆ?

ಫೇಸ್‍ಬುಕ್ ಪೋಸ್ಟ್‌ನ ಬಲಭಾಗದಲ್ಲಿ ಮೂರು ಚುಕ್ಕಿಗಳಾಗಿ ಕಾಣಿಸುವ ಡ್ರಾಪ್ ಡೌನ್ ಮೆನುವಿದೆ. ಅಲ್ಲಿ ಕ್ಲಿಕ್ ಮಾಡಿದರೆ ಹಲವಾರು ಆಪ್ಶನ್‌ಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಸೇವ್ ಪೋಸ್ಟ್ ಎಂಬುದರ ಕೆಳಗೆ Hide Post ಎಂಬ ಆಪ್ಶನ್ ಇದೆ. ಇದನ್ನು ಕ್ಲಿಕ್ ಮಾಡಿದರೆ ನಿಮ್ಮ ಸ್ನೇಹಿತರ ಪೋಸ್ಟ್ ನಿಮ್ಮ ಟೈಮ್‌ಲೈನ್‌ನಿಂದ ಮರೆಯಾಗುತ್ತದೆ. ಅದೇ ವೇಳೆ ನಿಮ್ಮ ಸ್ನೇಹಿತರೊಬ್ಬರು ಅಪ್‍ಲೋಡ್ ಮಾಡುತ್ತಿರುವ ಪೋಸ್ಟ್‌ಗಳು ನಿಮಗೆ ಕಿರಿಕಿರಿ ಎಂದು ಅನಿಸಿದರೆ Hide Post ಆಪ್ಶನ್ ಕೆಳಗೆ Snooze ಎಂಬ ಆಪ್ಶನ್ ಇದೆ. ಇದನ್ನು ಕ್ಲಿಕ್ ಮಾಡಿದರೆ 30 ದಿನಗಳವರೆಗೆ ನಿಮ್ಮ ಸ್ನೇಹಿತನ ಯಾವುದೇ ಪೋಸ್ಟ್ ನಿಮ್ಮ ನ್ಯೂಸ್ ಫೀಡ್‌ನಲ್ಲಿ ಕಾಣಿಸುವುದಿಲ್ಲ. 30 ದಿನಗಳ ನಂತರ ಎಂದಿನಂತೆ ಆ ಸ್ನೇಹಿತರ ಪೋಸ್ಟ್ ನಿಮ್ಮ ನ್ಯೂಸ್ ಫೀಡ್‌ನಲ್ಲಿ ಕಾಣಿಸಿಕೊಳ್ಳುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT