ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಟರಕ್ಷಣಾ ಪಡೆಗೆ ವೆಸ್ಸೆಲ್ - 410 ಗಸ್ತು ನೌಕೆ

Last Updated 31 ಜನವರಿ 2018, 11:30 IST
ಅಕ್ಷರ ಗಾತ್ರ

ಮಂಗಳೂರು: ಭಾರತೀಯ ಕೋಸ್ಟ್ ಗಾರ್ಡ್ (ತಟರಕ್ಷಣಾ ಪಡೆ) ಗಾಗಿ ಭಾರತಿ ಡಿಫೆನ್ಸ್ ಅಂಡ್ ಇನ್ ಫ್ರಾಸ್ಟ್ರಕ್ಚರ್ ಲಿಮಿಟೆಡ್ ನಿರ್ಮಿಸಿರುವ ವೆಸ್ಸೆಲ್ - 410 ಗಸ್ತು ನೌಕೆಯನ್ನು ಬುಧವಾರ ತಟರಕ್ಷಣಾ ಪಡೆಗೆ ಹಸ್ತಾಂತರ ಮಾಡಲಾಯಿತು.

ತಣ್ಣೀರುಬಾವಿ ಕಡಲ ತೀರದಲ್ಲಿರುವ ಭಾರತಿ ಶಿಪ್ ಯಾರ್ಡ್ ನಲ್ಲಿ ಕಂಪೆನಿಯ ಅಧಿಕಾರಿಗಳು ತಟರಕ್ಷಣಾ ಪಡೆಯ ಅಧಿಕಾರಿಗಳಿಗೆ ಗಸ್ತು ನೌಕೆಯನ್ನು ಹಸ್ತಾಂತರಿಸಿದರು. ಬಳಿಕ ನೌಕೆಯನ್ನು ಕಡಲಿಗೆ ಇಳಿಸಲಾಯಿತು.

ಬಿಡಿಐಎಲ್‌ ಕಂಪೆನಿ ತಟರಕ್ಷಣಾ ಪಡೆಗಾಗಿ 15 ಗಸ್ತು ನೌಕೆಗಳನ್ನು ನಿರ್ಮಿಸುತ್ತಿದೆ. ಆರನೇ ನೌಕೆಯನ್ನು ಬುಧವಾರ ಹಸ್ತಾಂತರ ಮಾಡಲಾಯಿತು. ಪ್ರತಿ ನೌಕೆಗೆ ₹ 25 ಕೋಟಿ ವೆಚ್ಚ ಮಾಡಲಾಗಿದೆ.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT