ವಿಶಿಷ್ಟ ಚಂದ್ರಗ್ರಹಣ: ನಾಸಾ ನೇರ ಪ್ರಸಾರ

7

ವಿಶಿಷ್ಟ ಚಂದ್ರಗ್ರಹಣ: ನಾಸಾ ನೇರ ಪ್ರಸಾರ

Published:
Updated:
ವಿಶಿಷ್ಟ ಚಂದ್ರಗ್ರಹಣ: ನಾಸಾ ನೇರ ಪ್ರಸಾರ

ಬೆಂಗಳೂರು: ಬುಧವಾರ ಸಂಜೆ ಘಟಿಸುವ ವಿಶಿಷ್ಟ ಚಂದ್ರಗ್ರಹಣ ವೀಕ್ಷಣೆಗೆ ಜಗತ್ತಿನಾದ್ಯಂತ ವಿವಿಧ ಸಂಸ್ಥೆಗಳು ಹಲವು ಕಡೆಗಳಲ್ಲಿ ಅವಕಾಶ ಕಲ್ಪಿಸಿವೆ. ಅಮೆರಿಕದ ನಾಸಾ ನೇರ ಪ್ರಸಾರ ನೀಡುತ್ತಿದೆ. 

ಸೂರ್ಯ ಚಂದ್ರನ ನಡುವೆ ಭೂಮಿ ಒಂದೇ ಸರಳರೇಖೆಯಲ್ಲಿ ಬರುವ ಈ ದಿನದಲ್ಲಿ ಭೂಮಿಯ ಛಾಯೆ ಚಂದ್ರನ ಮೇಲೆ ಬೀಳುತ್ತದೆ. 5.18ರಿಂದ ಚಂದ್ರನ ಮೇಲೆ ಭೂಮಿಯ ನೆರಳು (ಗ್ರಹಣ) ಬೀಳಲು ಪ್ರಾರಂಭವಾಗಿದೆ.

ಗ್ರಹಣಗಳು ನಿಯಮಿತವಾಗಿ ನಡೆಯುತ್ತಿರುತ್ತವೆ. ಆದರೆ, ಈ ಬಾರಿಯ ಚಂದ್ರಗ್ರಹಣ ಅನೇಕ ವಿಶಿಷ್ಟಗಳೊಂದಿಗೆ ಕೂಡಿದೆ. ಚಂದ್ರನು ಭೂಮಿಯ ಸುತ್ತ ದೀರ್ಘವೃತ್ತಾಕಾರವಾಗಿ ಸುತ್ತುತ್ತಾನೆ. ಒಂದು ಹಂತದಲ್ಲಿ ಭೂಮಿಗೆ ಬಹಳ ಸಮೀಪಿಸುತ್ತಾನೆ. ಇದಕ್ಕೆ ಸೂಪರ್‌ ಮೂನ್‌ ಎನ್ನುತ್ತೇವೆ.

ಕೆಂಪು ಮೂಡಿ...
ಸೂರ್ಯನನ್ನು ಭೂಮಿ ಸಂಪೂರ್ಣವಾಗಿ ಮರೆಮಾಡುತ್ತಿದ್ದಂತೆ ಭೂಮಿಯ ಛಾಯೆ ಚಂದ್ರನ ಮೇಲೆ ಬೀಳುತ್ತದೆ. ಆಗ ಬೆಳದಿಂಗಳ ಚಂದ್ರ ಕೆಂಪಗೆ ಕಾಣುತ್ತಾನೆ.

ಈ ಗ್ರಹಣದಲ್ಲಿ ಚಂದ್ರ, ಭೂಮಿಗೆ ಹತ್ತಿರವಾಗಿರುತ್ತಾನೆ. ತಿಂಗಳಲ್ಲಿ ಎರಡು ಹುಣ್ಣಿಮೆ ಅಪರೂಪ. ಅದೂ ಘಟಿಸುತ್ತಿರುವುದರಿಂದ ಗ್ರಹಣದ ಮೆರುಗು ಹೆಚ್ಚಲಿದೆ.

ಸಂಜೆ 6.20ರಿಂದ ರಾತ್ರಿ 8.30ರವರೆಗೆ ಈ ಖಗೋಳ ವಿದ್ಯಮಾನವನ್ನು ದೂರದರ್ಶಕಗಳ ಮೂಲಕ ವೀಕ್ಷಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry