ನಾಗರಹೊಳೆ; ಕೊಳೆತ ಸ್ಥಿತಿಯಲ್ಲಿ ಹುಲಿ ದೇಹ ಪತ್ತೆ

7

ನಾಗರಹೊಳೆ; ಕೊಳೆತ ಸ್ಥಿತಿಯಲ್ಲಿ ಹುಲಿ ದೇಹ ಪತ್ತೆ

Published:
Updated:
ನಾಗರಹೊಳೆ; ಕೊಳೆತ ಸ್ಥಿತಿಯಲ್ಲಿ ಹುಲಿ ದೇಹ ಪತ್ತೆ

ಹುಣಸೂರು: ನಾಗರಹೊಳೆ ಹುಲಿ ರಕ್ಷಿತಾರಣ್ಯದ ಬಿ.ಎಂ.ಸಿ ಬೀಟ್‌ ಬಾಳೆಕೋವು ವಲಯದಲ್ಲಿ ಸುಮಾರು 5ರಿಂದ 6 ವರ್ಷದ ಹುಲಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

‘ದೇಹದ ಅರ್ಧಭಾಗ ಕೊಳೆತಿರುವುದರಿಂದ ಗಂಡು ಅಥವಾ ಹೆಣ್ಣು ಎಂದು ಗುರುತಿಸಲು ಸಾಧ್ಯವಾಗಿಲ್ಲ’ ಎಂದು ಹುಲಿ ಯೋಜನಾ ನಿರ್ದೇಶಕ ಮಣಿಕಂಠನ್ ತಿಳಿಸಿದ್ದಾರೆ.

‘ಮೃತದೇಹದಲ್ಲಿ ಎಲ್ಲ ಹ ಲ್ಲು ಹಾಗೂ ಉಗುರುಗಳು ಸಿಕ್ಕಿವೆ. ದೇಹದ ಮೇಲೆ ಕಚ್ಚಿರುವ ಗುರುತು ಇದೆ. ಅರಣ್ಯದಲ್ಲಿ ವ್ಯಾಪ್ತಿ ಗುರುತಿಸಿಕೊಳ್ಳುವ ಸಮಯದಲ್ಲಿ ಮತ್ತೊಂದು ಹುಲಿಯೊಂದಿಗೆ ಸಾಮಾನ್ಯವಾಗಿ ಕಾದಾಟ ನಡೆಯುತ್ತದೆ. ಅಂತಹ ಸಮಯದಲ್ಲಿ ಬಲಿಷ್ಠ ಹುಲಿಯು ಶಕ್ತಿಹೀನ ಹುಲಿಯನ್ನು ಸಾಯಿಸುವುದು ಅಥವಾ ಓಡಿಸುವುದು ಸಾಮಾನ್ಯ’ ಎಂದು ಅವರು ಮಾಹಿತಿ ನೀಡಿದರು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ವಲಯದಲ್ಲಿ ಕಳೆದ ವಾರವಷ್ಟೇ ಎರಡು ಹುಲಿಗಳ ದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry