ಶೀಘ್ರವೇ ಹೊಸ ಕೈಗಾರಿಕಾ ನೀತಿ

7

ಶೀಘ್ರವೇ ಹೊಸ ಕೈಗಾರಿಕಾ ನೀತಿ

Published:
Updated:
ಶೀಘ್ರವೇ ಹೊಸ ಕೈಗಾರಿಕಾ ನೀತಿ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಹೊಸ ಕೈಗಾರಿಕಾ ನೀತಿಗೆ ಶೀಘ್ರವೇ ಅಂತಿಮ ರೂಪ ಕೊಡಲು ಚಾಲನೆ ನೀಡಲಾಗಿದೆ.

ಈ ಸಂಬಂಧ ಕೈಗಾರಿಕಾ ಮತ್ತು ವಾಣಿಜ್ಯ ಸಚಿವ  ಸುರೇಶ್‌ ಪ್ರಭವು ಅವರು ಫೆಬ್ರುವರಿ ತಿಂಗಳಲ್ಲಿ ಕೈಗಾರಿಕಾ ಸಂಘಟನೆಗಳ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಲಿದ್ದಾರೆ.

1991ರ ಕೈಗಾರಿಕಾ ನೀತಿಯನ್ನು ಸಮಗ್ರವಾಗಿ ಬದಲಿಸಲು ನಿರ್ಧರಿಸಲಾಗಿದೆ. ಉದ್ದೇಶಿತ ಹೊಸ ನೀತಿಯ ಕರಡನ್ನು ಈಗಾಗಲೇ

ಸಿದ್ಧಪಡಿಸಲಾಗಿದೆ.

ಮುಂದಿನ ಎರಡು ದಶಕಗಳಲ್ಲಿ ಗರಿಷ್ಠ ಮಟ್ಟದಲ್ಲಿ ಉದ್ಯೋಗ ಅವಕಾಶ ಸೃಷ್ಟಿಸಲು ನೆರವಾಗುವ, ವಿದೇಶಿ ತಂತ್ರಜ್ಞಾನ ವರ್ಗಾವಣೆ ಉತ್ತೇಜಿಸುವ ಮತ್ತು  ವರ್ಷಕ್ಕೆ ₹ 6.50 ಲಕ್ಷ ಕೋಟಿಗಳಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಮಾಡಿಕೊಡುವ ಕೈಗಾರಿಕಾ ನೀತಿಯ ಕರಡನ್ನು ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆ ಸಿದ್ಧಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry