ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವ ಸೂಚಿ; 42ನೇ ಸ್ಥಾನಕ್ಕೆ ಕುಸಿದ ಭಾರತ

ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ವರದಿ l 32ನೇ ಸ್ಥಾನದಲ್ಲಿದ್ದ ಭಾರತ
Last Updated 31 ಜನವರಿ 2018, 19:30 IST
ಅಕ್ಷರ ಗಾತ್ರ

ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತವು 32ನೇ ಸ್ಥಾನದಿಂದ 42ನೇ ಸ್ಥಾನಕ್ಕೆ ಕುಸಿದಿದೆ. ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (ಇಐಯು) ಪ್ರಕಟಿಸಿರುವ ವಾರ್ಷಿಕ ವರದಿಯಲ್ಲಿ ಭಾರತವನ್ನು ‘ಲೋಪದಿಂದ ಕೂಡಿರುವ ಪ್ರಜಾಪ್ರಭುತ್ವ’ದ ವರ್ಗಕ್ಕೆ ಸೇರಿಸಲಾಗಿದೆ. ಮೂಲಭೂತವಾದ ಮತ್ತು ಅಲ್ಪಸಂಖ್ಯಾಂತರ ವಿರುದ್ಧದ ಹಿಂಸಾಚಾರ ಹೆಚ್ಚಳವಾಗಿರುವುದೇ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತದ ಕುಸಿತಕ್ಕೆ ಕಾರಣ ಎಂದು ವರದಿಯಲ್ಲಿ ವಿವರಿಸಲಾಗಿದೆ

ಸಮೀಕ್ಷೆ ನಡೆದದ್ದು ಹೇಗೆ...

167 ಸಮೀಕ್ಷೆಗೆ ಒಳಪಡಿಸಿದ ದೇಶಗಳು

60 ಸಮೀಕ್ಷೆಯಲ್ಲಿ ಕೇಳಲಾಗಿದ್ದ ಪ್ರಶ್ನೆಗಳು

ಪ್ರಜಾಪ್ರಭುತ್ವ ಸೂಚಿಗಳು

ಪ್ರಜಾಪ್ರಭುತ್ವದ ವಿವಿಧ ಪ್ರಕ್ರಿಯೆ ಮತ್ತು ಲಕ್ಷಣಗಳನ್ನು 5 ಸೂಚಿಗಳಾಗಿ ವಿಂಗಡಿಸಲಾಗಿತ್ತು. ಐದೂ ಸೂಚಿಗಳ ಅಡಿ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಆಯಾ ಸೂಚಿಯಲ್ಲಿ ಆಯಾ ದೇಶಗಳು ಪಡೆದ ಅಂಕಗಳನ್ನು ಆಧರಿಸಿ ಅವುಗಳ ರ‍್ಯಾಂಕ್‌ ಅನ್ನು ನಿಗದಿ ಮಾಡಲಾಗಿದೆ

1. ಚುನಾವಣಾ ಪ್ರಕ್ರಿಯೆ ಮತ್ತು ಬಹುತ್ವಕ್ಕೆ ಮಾನ್ಯತೆ

2. ಸರ್ಕಾರದ ಕಾರ್ಯವೈಖರಿ

3. ರಾಜಕೀಯ ಭಾಗವಹಿಸುವಿಕೆ

4. ರಾಜಕೀಯ ಸಂಸ್ಕೃತಿ

5. ನಾಗರಿಕ ಸ್ವಾತಂತ್ರ್ಯ

*****************************

ಪೂರ್ಣ ಜನತಂತ್ರ ಅತಿ ವಿರಳ

ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಶೇ 4.5ರಷ್ಟು ಜನರು ಮಾತ್ರ ಪೂರ್ಣ ಪ್ರಜಾಪ್ರಭುತ್ವವಿರುವ ದೇಶಗಳಲ್ಲಿ ಜೀವಿಸುತ್ತಿದ್ದಾರೆ ಎಂದು ಸಮೀಕ್ಷಾ ವರದಿ ಹೇಳಿದೆ. ಸರ್ಕಾರ ಮತ್ತು ಆಡಳಿತದ ಸ್ವರೂಪವನ್ನು ಆಧರಿಸಿ ಪ್ರಜಾಪ್ರಭುತ್ವ ರಾಷ್ಟ್ರಗಳನ್ನು ಮೂರು ವರ್ಗಗಳಾಗಿ ವಿಭಾಗಿಸಲಾಗಿದೆ. ನಿರಂಕುಶ ಆಡಳಿತವಿರುವ ದೇಶಗಳನ್ನು ಮತ್ತೊಂದು ವರ್ಗವಾಗಿ ಪ್ರತ್ಯೇಕಿಸಲಾಗಿದೆ

ಪೂರ್ಣ ಜನತಂತ್ರ

ಚುನಾವಣೆ, ಆಡಳಿತ, ರಾಜಕೀಯ ಭಾಗವಹಿಸುವಿಕೆ ಎಲ್ಲದರಲ್ಲೂ ಯಾವುದೇ ತೊಡಕು ಇಲ್ಲದ ದೇಶಗಳನ್ನು ಈ ವರ್ಗಕ್ಕೆ ಸೇರಿಸಲಾಗಿದೆ

19 ದೇಶಗಳು

4.5 % ಜನಸಂಖ್ಯೆ ಪ್ರಮಾಣ (ಪೈ ಚಾರ್ಟ್‌ಗೆ)

ಲೋಪಯುಕ್ತ ಜನತಂತ್ರ

ಚುನಾವಣಾ ಪ್ರಕ್ರಿಯೆ ಮುಕ್ತವಾಗಿ ನಡೆಯುವ ದೇಶಗಳು. ಆದರೆ ಸರ್ಕಾರದ ಆಡಳಿತ, ರಾಜಕೀಯ ಭಾಗವಹಿಸುವಿಕೆ ಮತ್ತು ನಾಗರಿಕ ಸ್ವಾತಂತ್ರ್ಯದ ಚಲಾವಣೆಗೆ ತೊಡಕುಗಳಿರುವ ದೇಶಗಳು

57 ದೇಶಗಳು

44.8% ಜನಸಂಖ್ಯೆ ಪ್ರಮಾಣ (ಪೈ ಚಾರ್ಟ್‌ಗೆ)

ಹೈಬ್ರಿಡ್ ಜನತಂತ್ರ

ಚುನಾವಣಾ ಪ್ರಕ್ರಿಯೆ ಮುಕ್ತವಾಗಿ ನಡೆಯಲು ಅವಕಾಶವಿಲ್ಲದ ದೇಶಗಳನ್ನು ಈ ವರ್ಗಕ್ಕೆ ಸೇರಿಸಲಾಗಿದೆ. ಇಲ್ಲಿ ನಿಯತವಾಗಿ ಚುನಾವಣೆ ನಡೆಯುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ ಎಂದು ವರದಿ ಹೇಳಿದೆ

39 ದೇಶಗಳು

16.7% ಜನಸಂಖ್ಯೆ ಪ್ರಮಾಣ (ಪೈ ಚಾರ್ಟ್‌ಗೆ)

ನಿರಂಕುಶ ಪ್ರಭುತ್ವ

ಒಂದೇ ರಾಜಕೀಯ ಪಕ್ಷವಿರುವ ಮತ್ತು ನೆಪಕ್ಕಷ್ಟೇ ಚುನಾವಣೆ ನಡೆಯುವ ದೇಶಗಳನ್ನು ಈ ವರ್ಗಕ್ಕೆ ಸೇರಿಸಲಾಗಿದೆ

52 ದೇಶಗಳು

34 % ಜನಸಂಖ್ಯೆ ಪ್ರಮಾಣ (ಪೈ ಚಾರ್ಟ್‌ಗೆ)


ಮೊದಲ, ಕೊನೆಯ ಸ್ಥಾನಗಳು

1 ನಾರ್ವೆಯ ರ‍್ಯಾಂಕ್

167 ಉತ್ತರ ಕೊರಿಯಾದ ರ‍್ಯಾಂಕ್

*********************

ಜನತಂತ್ರ ಸೂಚಿಗಳಲ್ಲಿ ಭಾರತದ ಅಂಕಗಳು

10 – ಗರಿಷ್ಠ ಅಂಕ

7.23 – ಭಾರತದ ಅಂಕ

––––––––––––––––––

9.17 – ಚುನಾವಣಾ ಪ್ರಕ್ರಿಯೆ ಮತ್ತು ಬಹುತ್ವಕ್ಕೆ ಮಾನ್ಯತೆ

6.79 – ಸರ್ಕಾರದ ಕಾರ್ಯವೈಖರಿ

7.22 – ರಾಜಕೀಯ ಭಾಗವಹಿಸುವಿಕೆ

5.63 – ರಾಜಕೀಯ ಸಂಸ್ಕೃತಿ

7.35 – ನಾಗರಿಕ ಸ್ವಾತಂತ್ರ್ಯ

**********************

ಕುಸಿತಕ್ಕೆ ಕಾರಣಗಳು

* ಬಲಪಂಥೀಯ ಹಿಂದೂ ಸಂಘಟನೆಗಳ ಪ್ರಾಬಲ್ಯ ಹೆಚ್ಚಾದುದರಿಂದ ಅಲ್ಪಸಂಖ್ಯಾತರ, ಅದರಲ್ಲೂ ಮುಸ್ಲಿಮರ ವಿರುದ್ಧದ ಹಿಂಸಾಚಾರ ಹೆಚ್ಚಾಗಿದೆ. ಮೂಲಭೂತವಾದ ಹೆಚ್ಚುತ್ತಿದ್ದು, ಭಿನ್ನ ದನಿಗಳನ್ನು ಹತ್ತಿಕ್ಕಲಾಗುತ್ತಿದೆ. ಇದರಿಂದ ಬಹುತ್ವಕ್ಕೆ ಧಕ್ಕೆಯಾಗುತ್ತಿದೆ

* ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ. ಸರ್ಕಾರ, ಸೇನೆ, ಮೂಲಭೂತವಾದಿ ಸಂಘಟನೆಗಳಿಂದ ಪತ್ರಕರ್ತರು ಬೆದರಿಕೆ ಎದುರಿಸುತ್ತಿದ್ದಾರೆ. ಹಲವು ಪತ್ರಕರ್ತರ ಹತ್ಯೆಯಾಗಿದೆ. ಕೆಲವು ಮಾಧ್ಯಮಗಳ ವಿರುದ್ಧ ತಾತ್ಕಾಲಿಕ ನಿಷೇಧದ ಕ್ರಮವನ್ನೂ ತೆಗೆದುಕೊಳ್ಳಲಾಗಿದೆ

* ಭಾರತದ ಮಾಧ್ಯಮವನ್ನು ಭಾಗಶಃ ಮುಕ್ತ ವರ್ಗಕ್ಕೆ ಸೇರಿಸಲಾಗಿದೆ

7 ಮಾಧ್ಯಮ ಸ್ವಾತಂತ್ರ್ಯದಲ್ಲಿ ಭಾರತ ಪಡೆದ ಅಂಕ

49 ಮಾಧ್ಯಮ ಸ್ವಾತಂತ್ರ್ಯದಲ್ಲಿ ಭಾರತದ ಸ್ಥಾನ

ಆಧಾರ: ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್‌ನ ‘ಡೆಮಾಕ್ರಸಿ ಇಂಡೆಕ್ಸ್–2017’ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT