ಇಂಡಿಯಾ ಓಪನ್ ಬಾಕ್ಸಿಂಗ್‌ ಟೂರ್ನಿ; ಫೈನಲ್‌ಗೆ ಮೇರಿ ಕೋಮ್‌

7

ಇಂಡಿಯಾ ಓಪನ್ ಬಾಕ್ಸಿಂಗ್‌ ಟೂರ್ನಿ; ಫೈನಲ್‌ಗೆ ಮೇರಿ ಕೋಮ್‌

Published:
Updated:
ಇಂಡಿಯಾ ಓಪನ್ ಬಾಕ್ಸಿಂಗ್‌ ಟೂರ್ನಿ; ಫೈನಲ್‌ಗೆ ಮೇರಿ ಕೋಮ್‌

ನವದೆಹಲಿ: ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಎಮ್‌.ಸಿ ಮೇರಿ ಕೋಮ್‌ ಇಲ್ಲಿ ನಡೆಯುತ್ತಿರುವ ಇಂಡಿಯಾ ಓಪನ್ ಬಾಕ್ಸಿಂಗ್ ಟೂರ್ನಿಯಲ್ಲಿ ಬುಧವಾರ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಶಿವಥಾಪ ಹಾಗೂ ಮನೋಜ್ ಕುಮಾರ್ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇಲ್ಲಿ 12ನೇ ಶ್ರೇಯಾಂಕ ಹೊಂದಿರುವ ಮೇರಿ ಮಹಿಳೆಯರ 48ಕೆ.ಜಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಮಂಗೋಲಿಯಾದ ಅಟ್ಲನ್‌ಸೆಟ್ಸಗ್‌ ಅವರನ್ನು ಮಣಿಸಿದರು.

ಮೊದಲ ಎರಡು ಸುತ್ತುಗಳಲ್ಲಿ ಮೇರಿ ಕೋಮ್‌ ಆಕ್ರಮಣಕಾರಿಯಾಗಿ ಆಡಿದರು. ಬಳಿಕ ನಿಧಾನವಾಗಿ ಆಡುವ ಮೂಲಕ ಎದುರಾಳಿಯ ತಂತ್ರಗಳು ಸಫಲವಾಗದಂತೆ ತಡೆದು ಪಾಯಿಂಟ್ಸ್ ಪಡೆದುಕೊಂಡರು. ಮಣಿಪುರದ ಆಟಗಾರ್ತಿ ಕೊನೆಯ ಮೂರು ನಿಮಿಷಗಳಲ್ಲಿ ಹೆಚ್ಚು ಪಾಯಿಂಟ್ಸ್ ಬಿಟ್ಟುಕೊಟ್ಟರು. ಆದರೆ ಆರಂಭದಲ್ಲಿ ಅವರು ದಾಖಲಿಸಿದ್ದ ಪಾಯಿಂಟ್ಸ್‌ಗಳ ನೆರವಿನಿಂದ ಅವರಿಗೆ ಗೆಲುವು ಒಲಿಯಿತು.

ಮುಂದಿನ ಪಂದ್ಯದಲ್ಲಿ ಅವರು ಫಿಲಿಪ್ಪೀನ್ಸ್‌ನ ಜೋಸಿ ಗಬುಕೊ ಅವರನ್ನು ಎದುರಿಸಲಿದ್ದಾರೆ. ಜೋಸಿ ಸೆಮಿಫೈನಲ್ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಮೋನಿಕಾ ಎದುರು ಗೆದ್ದಿದ್ದಾರೆ.

ಪುರುಷರ 60ಕೆ.ಜಿ ವಿಭಾಗದಲ್ಲಿ ಶಿವ ಭಾರತದವರೇ ಆದ ಮನೀಷ್ ಕೌಶಿಕ್ ಎದುರು ಸೋತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry