ಪ್ರಾಣಿಗಳ ಅನಧಿಕೃತ ವಧೆ ನಿಷೇಧ

7

ಪ್ರಾಣಿಗಳ ಅನಧಿಕೃತ ವಧೆ ನಿಷೇಧ

Published:
Updated:

ಬೆಂಗಳೂರು: ಅನಧಿಕೃತವಾಗಿ ಪ್ರಾಣಿಗಳ ವಧೆ ಹಾಗೂ ಸಾರ್ವಜನಿಕವಾಗಿ ಪ್ರಾಣಿಗಳನ್ನು ಬಲಿ ನೀಡುವುದನ್ನು ನಿಷೇಧಿಸಲಾಗಿದೆ ಎಂದು ಪಾಲಿಕೆ ತಿಳಿಸಿದೆ.

ಬಿಬಿಎಂಪಿ ವತಿಯಿಂದ ಪರವಾನಗಿ ಪಡೆದಿರುವ ಅಂಗಡಿಗಳಲ್ಲಿ ಮಾತ್ರ ದನ, ಕುರಿ, ಮೇಕೆ ಮತ್ತು ಹಂದಿ ಮಾಂಸ ಮಾರಾಟ ಮಾಡಬಹುದು. ಈ ಅಂಗಡಿಗಳಲ್ಲಿ ಪ್ರಾಣಿ ವಧೆ ನಿಷೇಧಿಸಲಾಗಿದೆ. ಪಾಲಿಕೆಯ ಅಧಿಕೃತ ಕಸಾಯಿಖಾನೆಗಳಲ್ಲಿ ವಧೆ ಮಾಡಿದ ಮತ್ತು ಮೊಹರು ಹಾಕಿದ ಮಾಂಸವನ್ನೇ ಮಾರಾಟ ಮಾಡಬೇಕು ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಧಿಕೃತ ದೃಢೀಕರಣ ಪತ್ರ ಪಡೆದ ಪ್ರಾಣಿಗಳನ್ನು ಮಾತ್ರ ವಾಹನಗಳಲ್ಲಿ ಸಾಗಣೆ ಮಾಡಬಹುದು. ಅನಧಿಕೃತವಾಗಿ ಪ್ರಾಣಿ ಸಾಗಣೆ ನಿಷೇಧಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಕೋಳಿ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಘನತ್ಯಾಜ್ಯ ವಿತರಣಾ ವಾಹನಗಳಲ್ಲಿ ಮಾತ್ರ ಸಾಗಿಸಬೇಕು ಎಂದು ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry