ಬಿ–ಟ್ರಾಕ್: ₹ 85.34 ಕೋಟಿ ವೆಚ್ಚದಲ್ಲಿ ಉನ್ನತೀಕರಣ

7

ಬಿ–ಟ್ರಾಕ್: ₹ 85.34 ಕೋಟಿ ವೆಚ್ಚದಲ್ಲಿ ಉನ್ನತೀಕರಣ

Published:
Updated:

ಬೆಂಗಳೂರು: ಬಿ-ಟ್ರ್ಯಾಕ್ ಯೋಜನೆಯಡಿ ನಗರದಲ್ಲಿ ಟ್ರಾಫಿಕ್ ಸಿಗ್ನಲ್‍ಗಳು, ಜಂಕ್ಷನ್‌ಗಳನ್ನು ₹85.34 ಕೋಟಿ ವೆಚ್ಚದಲ್ಲಿ ಉನ್ನತೀಕರಿಸಲು ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಸಿಂಕ್ರೋನೈಜ್ಡ್ ಪಾದಚಾರಿ ಮಾರ್ಗಗಳಲ್ಲಿರುವ ದೀಪಗಳು ಮತ್ತು ರಸ್ತೆ ಪರಿಕರಗಳು ಸೇರಿದಂತೆ ಪ್ರಸ್ತುತ ಇರುವ 363 ಟ್ರಾಫಿಕ್ ಸಿಗ್ನಲ್‍ಗಳನ್ನು ಮೇಲ್ದರ್ಜೆಗೇರಿಸಿ, ನಿರ್ವಹಿಸಲು ಉದ್ದೇಶಿಸಲಾಗಿದೆ. ಅದೇ ರೀತಿ ಹೊಸ 100 ಟ್ರಾಫಿಕ್ ಜಂಕ್ಷನ್‍ಗಳಲ್ಲಿ ಅತ್ಯಾಧುನಿಕ ದೀಪ ಅಳವಡಿಸಲು ಟೆಂಡರ್‌ ಕರೆಯಲಾಗುವುದು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ಈ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry