ತನ್ವೀರ್‌ ಸೇಠ್‌ಗೆ ಜೆಡಿಎಸ್‌ ಗಾಳ?

7

ತನ್ವೀರ್‌ ಸೇಠ್‌ಗೆ ಜೆಡಿಎಸ್‌ ಗಾಳ?

Published:
Updated:

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಅಸಮಾಧಾನಗೊಂಡಿರುವ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಅವರನ್ನು ಪಕ್ಷಕ್ಕೆ ಸೆಳೆಯಲು ಜೆಡಿಎಸ್‌ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಮೈಸೂರಿಗೆ ಸಂಬಂಧಿಸಿದ ಕೆಲವು ವಿಚಾರಗಳ ಕುರಿತು ಇಬ್ಬರ ಮಧ್ಯೆ ಸಂಬಂಧ ಹಳಸಿದೆ. ರಾಯಚೂರು ಉಸ್ತುವಾರಿಯಿಂದ ತೆಗೆದು ಎಚ್‌.ಎಂ.ರೇವಣ್ಣ ಅವರನ್ನು ನೇಮಿಸಿದ ಬಳಿಕ ಭಿನ್ನಮತ ಇನ್ನಷ್ಟು ತಾರಕಕ್ಕೆ ಏರಿದೆ. ರಾಯಚೂರು ಉಸ್ತುವಾರಿಯಿಂದ ತೆಗೆಯುವ ಸೂಚನೆ ಸಿಗುತ್ತಿದ್ದಂತೆ, ಮುಜುಗರ ಆಗಬಾರದು ಎಂದು ತಮ್ಮನ್ನು ಉಸ್ತುವಾರಿಯಿಂದ ಮುಕ್ತಿಗೊಳಿಸುವಂತೆ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು ಎಂದು ಮೂಲಗಳು ಹೇಳಿವೆ.

‘ಕಾಂಗ್ರೆಸ್‌ ತೊರೆಯುವ ಬಗ್ಗೆ ತನ್ವೀರ್‌ ಒಲವು ಹೊಂದಿಲ್ಲ. ಜೆಡಿಎಸ್‌ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಆದರೆ, ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಅವರಿಗೆ ಸಮಾಧಾನ ಇಲ್ಲ’ ಎಂದು ಸಚಿವರ ಆಪ್ತ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry