ವಜ್ರ ಬಸ್‌ ಪ್ರಯಾಣ ದರ ಇಳಿಕೆ: 28ರವರೆಗೆ ವಿಸ್ತರಣೆ

7

ವಜ್ರ ಬಸ್‌ ಪ್ರಯಾಣ ದರ ಇಳಿಕೆ: 28ರವರೆಗೆ ವಿಸ್ತರಣೆ

Published:
Updated:

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಮಾರ್ಗದಲ್ಲಿ ಸಂಚರಿಸುವ ವಜ್ರ ಮತ್ತು ವಾಯುವಜ್ರ ಹವಾ ನಿಯಂತ್ರಿತ ಬಸ್‌ಗಳ ಪರಿಷ್ಕೃತ ಪ್ರಯಾಣ ದರವನ್ನು ಫೆಬ್ರುವರಿ 28ರವರೆಗೆ ವಿಸ್ತರಿಸಲಾಗಿದೆ.

ವಜ್ರ ಬಸ್‌ಗಳ ಪ್ರಯಾಣ ದರದಲ್ಲಿ ಶೇ 25ರಿಂದ ಶೇ 37ರವರೆಗೆ ಕಡಿತಗೊಳಿಸಿ ಪರಿಷ್ಕೃತ ಪ್ರಯಾಣ ದರವನ್ನು ಜನವರಿ 1ರಿಂದ 31ರವರೆಗೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಲಭಿಸಿದ್ದರಿಂದ ಈ ಸೇವೆಯನ್ನು ಮುಂದುವರಿಸಲಾಗಿದೆ.

ಮೇಕ್ರಿ ವೃತ್ತ, ಹೆಬ್ಬಾಳ, ಎಸ್ಟೀಮ್‌ ಮಾಲ್‌, ಕೋಗಿಲು ಕ್ರಾಸ್‌ನಿಂದ ಕೆಐಎಗೆ ಸಂಚರಿಸುವ ವಾಯುವಜ್ರ ಬಸ್‌ಗಳಲ್ಲಿ ಜಿಎಸ್‌ಟಿ (ಶೇ 5) ಮತ್ತು ಟೋಲ್‌ ದರ ಪ್ರತಿ ಪ್ರಯಾಣಿಕರಿಗೆ ₹12 ಹೊರತುಪಡಿಸಿ, ಪ್ರಯಾಣ ದರ ಪರಿಷ್ಕರಿಸಲಾಗಿದೆ. ಹುಣಸಮಾರನಹಳ್ಳಿಯಿಂದ ಕೆಐಎಗೆ ಹೊಸದಾಗಿ ಪ್ರಯಾಣ ದರ ₹100 ನಿಗದಿಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry