ಬ್ಲೂ ಮತ್ತು ವೈಟ್ ತಂಡಕ್ಕೆ ಜಯ

7

ಬ್ಲೂ ಮತ್ತು ವೈಟ್ ತಂಡಕ್ಕೆ ಜಯ

Published:
Updated:

ಬೆಂಗಳೂರು: ವಿ.ಸುರೇಂದರ್‌ ಹಾಗೂ ಪಿ.ದಿನೇಶ್‌ ರಾಜಾ ಅವರ ತಲಾ ಎರಡು ಗೋಲುಗಳ ನೆರವಿನಿಂದ ಬ್ಲೂ ಮತ್ತು ವೈಟ್ ಎಚ್‌ಸಿ ತಂಡ ಇಲ್ಲಿ ನಡೆಯುತ್ತಿರುವ ಬಿಎಚ್‌ಎ ವತಿಯ ‘ಎ’ ಡಿವಿಷನ್‌ ಹಾಕಿ ಲೀಗ್ ಚಾಂಪಿಯನ್‌ಷಿಪ್ ಪಂದ್ಯದಲ್ಲಿ ಬುಧವಾರ ಗೆದ್ದಿದೆ.

ಬ್ಲೂ ಮತ್ತು ವೈಟ್ ಎಚ್‌ಸಿ 6–0 ಗೋಲುಗಳಿಂದ ಹಾಸನ ಕ್ಲಬ್‌ ಎದುರು ಜಯದಾಖಲಿಸಿತು.

ವಿಜಯೀ ತಂಡದ ವಿ.ಸುರೇಂದರ್‌ (6, 33ನೇ ನಿ.), ಪಿ.ರಾಜಾ ಪೆರುಮಲ್‌ (18ನೇ ನಿ.), ಪಿ.ದಿನೇಶ್ ರಾಜಾ (35, 37ನೇ ನಿ.), ಎಮ್‌.ಚೀನಾ ದುರೈ (48ನೇ ನಿ.) ಗೋಲು ತಂದಿತ್ತರು. ಇನ್ನೊಂದು ಪಂದ್ಯದಲ್ಲಿ ಕೂರ್ಗ್‌ ಬ್ಲೂಸ್‌ ಎಚ್‌ಸಿ 2–1ರಲ್ಲಿ ರೇಂಜರ್ಸ್ ಕ್ಲಬ್‌ ಎದುರು ಗೆದ್ದಿದೆ. ಕೂರ್ಗ್ ತಂಡದ ನವದೀಪ್‌ (8ನೇ ನಿ.), ಆಲಮ್‌ (14ನೇ ನಿ.) ತಲಾ ಒಂದು ಗೋಲು ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry