ಮೊಮಿನುಲ್ ಭರ್ಜರಿ ಬ್ಯಾಟಿಂಗ್‌

5
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ; ಭಾರಿ ಮೊತ್ತದತ್ತ ಬಾಂಗ್ಲಾದೇಶ

ಮೊಮಿನುಲ್ ಭರ್ಜರಿ ಬ್ಯಾಟಿಂಗ್‌

Published:
Updated:
ಮೊಮಿನುಲ್ ಭರ್ಜರಿ ಬ್ಯಾಟಿಂಗ್‌

ಚಿತ್ತಗಾಂಗ್‌ (ಎಎಫ್‌ಪಿ): ಸ್ಫೋಟಕ ಶತಕ ಸಿಡಿಸಿದ ಮೊಮಿನುಲ್ ಹಕ್‌ (ಔಟಾಗದೆ 175; 203 ಎಸೆತ, 1 ಸಿ, 16 ಬೌಂ) ಮತ್ತು ಮೂರನೇ ವಿಕೆಟ್‌ಗೆ ಮೊಮಿನುಲ್‌–ಮುಷ್ಫಿಕರ್‌ ರಹೀಮ್‌ ಸೇರಿಸಿದ 236 ರನ್‌ಗಳು ಬಾಂಗ್ಲಾದೇಶವನ್ನು ಉತ್ತಮ ಸ್ಥಿತಿಗೆ ತಲುಪಿಸಿತು. ‌

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯರು ನಾಲ್ಕು ವಿಕೆಟ್‌ಗೆ 374 ರನ್ ಗಳಿಸಿದೆ.

ಮೊದಲ ವಿಕೆಟ್‌ಗೆ ತಮೀಮ್ ಇಕ್ಬಾಲ್ (52; 53, 1 ಸಿ, 6 ಸಿ) ಮತ್ತು ಇಮ್ರುಲ್ ಕೈಸ್ 72 ರನ್‌ ಸೇರಿಸಿದರು. ತಮೀಮ್‌ ಔಟಾದ ನಂತರ ಕ್ರೀಸ್‌ಗೆ ಬಂದ ಮೊಮಿನುಲ್‌  ಉತ್ತಮವಾಗಿ ಆಡಿದರು.  ಅವರೊಂದಿಗೆ ಮುಫ್ಪಿಕರ್‌ ರಹೀಮ್ ಸೇರಿದ ನಂತರ ಶ್ರೀಲಂಕಾ ಬೌಲರ್‌ಗಳು ಬಸವಳಿದರು. ದಿನದಾಟದ ಮುಕ್ತಾಯಕ್ಕೆ ಆರು ಓವರ್‌ಗಳು ಬಾಕಿ ಇರುವವರೆಗೂ ಇವರಿಬ್ಬರು ಬೌಲರ್‌ಗಳನ್ನು ಕಾಡಿದರು.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ, ಮೊದಲ ಇನಿಂಗ್ಸ್‌: 90 ಓವರ್‌ಗಳಲ್ಲಿ 4ಕ್ಕೆ 374 (ತಮೀಮ್ ಇಕ್ಬಾಲ್‌ 52, ಇಮ್ರುಲ್ ಕೈಸ್‌ 40, ಮೊಮಿನುಲ್ ಹಕ್‌ 175, ಮುಷ್ಫೀಕರ್ ರಹೀಮ್‌ 92; ಸುರಂಗ ಲಕ್ಮಲ್‌ 43ಕ್ಕೆ2). ಶ್ರೀಲಂಕಾ ಎದುರಿನ ಪಂದ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry