ಪ್ಲೇ ಆಫ್‌ ಮೇಲೆ ಮುಂಬೈ ಸಿಟಿ ಕಣ್ಣು

7

ಪ್ಲೇ ಆಫ್‌ ಮೇಲೆ ಮುಂಬೈ ಸಿಟಿ ಕಣ್ಣು

Published:
Updated:
ಪ್ಲೇ ಆಫ್‌ ಮೇಲೆ ಮುಂಬೈ ಸಿಟಿ ಕಣ್ಣು

ಮುಂಬೈ : ಮುಂಬೈ ಸಿಟಿ ಹಾಗೂ ಜೆಮ್‌ಷೆಡ್‌ಪುರ ಎಫ್‌ಸಿ ತಂಡಗಳೆರಡೂ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಟೂರ್ನಿಯ ಪ್ಲೇ ಆಫ್‌ ಮೇಲೆ ಕಣ್ಣು ನೆಟ್ಟಿವೆ.

ಗುರುವಾರ ನಡೆಯುವ ಪಂದ್ಯದಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾಗಲಿವೆ. ಪಾಯಿಂಟ್ಸ್ ಪಟ್ಟಿಯಲ್ಲಿ ಜೆಮ್‌ಷೆಡ್‌ಪುರ ಐದನೇ ಸ್ಥಾನದಲ್ಲಿ ಇದ್ದರೆ, ಮುಂಬೈ ಸಿಟಿ ತಂಡ ಆರನೇ ಸ್ಥಾನ ಹೊಂದಿದೆ. ಎರಡೂ ತಂಡಗಳು ಕ್ರಮವಾಗಿ 19 ಮತ್ತು 17 ಪಾಯಿಂಟ್ಸ್ ಹೊಂದಿವೆ.

ಮುಂಬೈ ತಂಡ ಹಿಂದಿನ ಪಂದ್ಯದಲ್ಲಿ 4–3ರಲ್ಲಿ ಎಫ್‌ಸಿ ಗೋವಾಗೆ ಸೋಲುಣಿಸಿತ್ತು. ತವರಿನಲ್ಲಿ ನಡೆಯುವ ಪೈಪೋಟಿಯಲ್ಲಿಯೂ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ. ಜೆಮ್‌ಷೆಡ್‌ಪುರ ತಂಡ ಕೂಡ ಹಿಂದಿನ ಪಂದ್ಯದಲ್ಲಿ 1–0 ಗೋಲಿನಿಂದ ಅಟ್ಲೆಟಿಕೊ ಡಿ ಕೋಲ್ಕತ್ತ ಎದುರು ಗೆದ್ದಿದೆ. ಈ ಮೊದಲಿನ ಮುಖಾಮುಖಿಯಲ್ಲಿ ಜೆಮ್‌ಷೆಡ್‌ಪುರ ತಂಡ ಗೆಲುವು ಒಲಿಸಿಕೊಂಡಿತ್ತು.

ಪ್ಲೇ ಆಫ್‌ ತಲುಪಬೇಕಾದರೆ ಮೊದಲ ಮೂರು ಸ್ಥಾನಗಳಲ್ಲಿರುವ ತಂಡಗಳಿಗೆ ಪೈಪೋಟಿ ನೀಡಬೇಕಿದೆ. ಆದ್ದರಿಂದ ಎರಡೂ ತಂಡಗಳಿಗೂ ಇದು ಪ್ರಮುಖ ಪಂದ್ಯ ಎನಿಸಿದೆ. ತವರಿನಲ್ಲಿ ನಡೆದ ಹಿಂದಿನ ಎರಡು ಪಂದ್ಯಗಳಲ್ಲಿ ಮುಂಬೈ ತಂಡ 1–0ರಲ್ಲಿ ಕೇರಳ ಬ್ಲಾಸ್ಟರ್ಸ್ ಮೇಲೂ, 3–1ರಲ್ಲಿ ಬೆಂಗಳೂರು ಎಫ್‌ಸಿ ವಿರುದ್ಧವೂ ಗೆದ್ದು ವಿಶ್ವಾಸ ಹೆಚ್ದಿಸಿಕೊಂಡಿದೆ.

‘ಜೆಮ್‌ಷೆಡ್‌ಪುರ ಎಲ್ಲಾ ವಿಭಿನ್ನ ಯೋಜನೆಯೊಂದಿಗೆ ಆಡುತ್ತದೆ. ಸವಾಲುಗಳಿಗೆ ನಾವು ಸಜ್ಜಾಗಿದ್ದೇವೆ’ ಎಂದು ಮುಂಬೈ ತಂಡದ ಕೋಚ್ ಅಲೆಕ್ಸಾಂಡರ್‌ ಗುಮರೆಸ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry