ರಾಜ್ಯದೆಲ್ಲೆಡೆ ಪಕೋಡ ಸ್ಟಾಲ್‌ ತೆರೆದು ನಾಳೆ ಪ್ರತಿಭಟನೆ

7

ರಾಜ್ಯದೆಲ್ಲೆಡೆ ಪಕೋಡ ಸ್ಟಾಲ್‌ ತೆರೆದು ನಾಳೆ ಪ್ರತಿಭಟನೆ

Published:
Updated:
ರಾಜ್ಯದೆಲ್ಲೆಡೆ ಪಕೋಡ ಸ್ಟಾಲ್‌ ತೆರೆದು ನಾಳೆ ಪ್ರತಿಭಟನೆ

ಬೆಂಗಳೂರು: ಜಿಲ್ಲಾ, ತಾಲ್ಲೂಕು ಕೇಂದ್ರಗಳ ಮುಂದೆ ಫೆಬ್ರುವರಿ 2ರಂದು ಪಕೋಡ ಸ್ಟಾಲ್‌ ತೆರೆದು ಪ್ರತಿಭಟನೆ ನಡೆಸಲಾಗುತ್ತದೆ ಎಂದುಉದ್ಯೋಗಕ್ಕಾಗಿ ಯುವಜನ ವೇದಿಕೆಯ ಸಂಚಾಲಕ ಸರೋವರ್‌ ಬೆಂಕಿಕೆರೆ ತಿಳಿಸಿದರು.

ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವರ್ಷಕ್ಕೆ 1 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಭರವಸೆ ನೀಡಿದ್ದರು. ಪಕೋಡ ಮಾರುವುದು ಉದ್ಯೋಗವೇ ಎಂದು ಅವರು ಇತ್ತೀಚೆಗೆ ಉಡಾಫೆ ಉತ್ತರ ನೀಡಿದ್ದಾರೆ. ದೇಶದ ಶೇ 47ರಷ್ಟು ಸ್ವಯಂ ಉದ್ಯೋಗಗಳನ್ನೇ ಮಾಡುತ್ತಿದ್ದಾರೆ. ಇವು ಮೋದಿ ಸರ್ಕಾರ ಸೃಷ್ಟಿಸಿದ ಕೆಲಸಗಳಲ್ಲ’ ಎಂದರು.

‘ನಗರದ ಬಿಜೆಪಿ ಕಚೇರಿ ಎದುರು ಪಕೋಡ ಸ್ಟಾಲ್‌ ತೆರೆದು ಜನವರಿ 27ರಂದು ಪ್ರತಿಭಟನೆ ನಡೆಸಿದ್ದೆವು. ಫೆ. 4ರಂದು ಮೋದಿ ಅವರೊಂದಿಗೆ ಸಂವಾದ ನಡೆಸಲು ಒಂದು ಗಂಟೆ ಕಾಲಾವಕಾಶ ನೀಡುವುದಾಗಿ ಪಾಲಿಕೆಯ ಬಿಜೆಪಿ ಸದಸ್ಯ ಮಂಜುನಾಥರಾಜು ಭರವಸೆ ನೀಡಿದ್ದರು. ಆದರೆ, ಅವರಿಂದ ಪ್ರತಿಕ್ರಿಯೆ ಬಂದಿಲ್ಲ’ ಎಂದರು.

ಕರ್ನಾಟಕ ಜನಶಕ್ತಿ ವೇದಿಕೆಯ ಸದಸ್ಯ ವಾಸು ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry