ಬೆಳಗ್ಗೆ 11 ಗಂಟೆಗೆ ಕೇಂದ್ರ ಬಜೆಟ್ ಮಂಡನೆ

ನವದೆಹಲಿ: ಕೇಂದ್ರದ ಎನ್‌ಡಿಎ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್‌ನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಇಂದು ಲೋಕಸಭೆಯಲ್ಲಿ ಬೆಳಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ. ಅಭಿವೃದ್ಧಿ ಮತ್ತು ಜನಪರ ಕಾಳಜಿ ಇರುವ ಬಜೆಟ್ ಇದಾಗಲಿದೆ ಎಂಬುದು ಜನರ ನಿರೀಕ್ಷೆ.
ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ ಮತ್ತು ಕಂಪನಿ ತೆರಿಗೆ ಶೇ.30ರಿಂದ ಶೇ 25ಕ್ಕೆ ಇಳಿಕೆ, ಕೃಷಿ ಮತ್ತು ಗ್ರಾಮೀಣ ವಲಯಕ್ಕೆ ಉತ್ತೇಜನ ನೀಡುವ ಕಾರ್ಯಗಳನ್ನು ಈ ಬಜೆಟ್‍ನಲ್ಲಿ ನಿರೀಕ್ಷಿಸಲಾಗಿದೆ.
ನೋಟು ರದ್ದತಿ ನಂತರ ಮಂಡನೆಯಾಗುವ ಎರಡನೇ ಬಜೆಟ್ ಆಗಿದೆ ಇದು. ಅದೇ ವೇಳೆ ಜಿಎಸ್‍ಟಿ ಅನುಷ್ಠಾನದ ನಂತರ ಮಂಡನೆಯಾಗುವ ಮೊದಲ ಬಜೆಟ್ ಆಗಿದೆ. ಕೃಷಿ, ಉದ್ಯಮ ವಲಯದಲ್ಲಿ ಪ್ರಗತಿ ಕುಂಠಿತವಾಗಿದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾಗಿತ್ತು. ಆದ್ದರಿಂದ ಈ ಎರಡು ವಲಯ ಸೇರಿದಂತೆ ಗ್ರಾಮೀಣ ವಲಯಕ್ಕೂ ಹೆಚ್ಚು ಒತ್ತು ನೀಡುವ ಸಾಧ್ಯತೆ ಇದೆ. ಆದಾಗ್ಯೂ, ಕಾರ್ಪರೇಟ್ ತೆರಿಗೆಯಲ್ಲಿ ಹೆಚ್ಚಿನ ಬದಲಾವಣೆಗಳಿಗೆ ಸಾಧ್ಯತೆ ಇಲ್ಲ.
ಪ್ರತಿಕ್ರಿಯಿಸಿ (+)