ಮಲಯಾಳಂ ಚಿತ್ರದಲ್ಲಿ ಸುದೀಪ್‌

7

ಮಲಯಾಳಂ ಚಿತ್ರದಲ್ಲಿ ಸುದೀಪ್‌

Published:
Updated:
ಮಲಯಾಳಂ ಚಿತ್ರದಲ್ಲಿ ಸುದೀಪ್‌

ಮಾಲಿವುಡ್‌ನ ಹಿರಿಯ ನಟ ಮೋಹನ್‌ಲಾಲ್‌ ನಾಯಕನಾಗಿ ನಟಿಸುತ್ತಿರುವ ಮಲಯಾಳಂ ಚಿತ್ರದಲ್ಲಿ ‘ಕಿಚ್ಚ‘ ಸುದೀಪ್‌ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಆದರೆ ಈ ಸುದ್ದಿಯನ್ನು, ಚಿತ್ರದ ನಿರ್ದೇಶಕ ಅಜಯ್‌ ವರ್ಮಾ ಅವರು ಖಚಿತಪಡಿಸಿಲ್ಲ.

‘ಈ ಪಾತ್ರದಲ್ಲಿ ಬಾಲಿವುಡ್‌ ನಟರೊಬ್ಬರು ಅಭಿನಯಿಸಲಿದ್ದಾರೆ. ಮೋಹನ್‌ಲಾಲ್‌ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ನಟಿಯ ಹೆಸರನ್ನು ಶೀಘ್ರ ಬಹಿರಂಗಗೊಳಿಸಲಾಗುವುದು’ ಎಂದು ಅಜಯ್‌ ಹೇಳಿದ್ದಾರೆ. ಆದರೂ ಮಲೆಯಾಳಂ ಮಾಧ್ಯಮಗಳಲ್ಲಿ ಸುದೀಪ್‌ ಅವರ ಹೆಸರು ಕೇಳಿಬರುತ್ತಲೇ ಇದೆ.

ಪಾರ್ವತಿ ನಾಯರ್‌ ಸಹ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂಬೈ ಹಾಗೂ ಪುಣೆಗಳಲ್ಲಿ ಚಿತ್ರೀಕರಣ ನಡೆಯಲಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry