ಶುಕ್ರವಾರ, ಡಿಸೆಂಬರ್ 6, 2019
24 °C

2018–19ನೇ ಸಾಲಿನ ಕೇಂದ್ರ ಬಜೆಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2018–19ನೇ ಸಾಲಿನ ಕೇಂದ್ರ ಬಜೆಟ್‌

ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ಐದನೇ ಬಾರಿಗೆ ಬಜೆಟ್‌ ಮಂಡಿಸುತ್ತಿದ್ದಾರೆ.

2017–18ನೇ ಸಾಲಿನಿಂದಲೇ ಸಾಮಾನ್ಯ ಹಾಗೂ ರೈಲ್ವೆ ಬಜೆಟ್‌ ವಿಲೀನಗೊಳಿಸಲಾಗಿದೆ.

ಈ ಬಾರಿ ಹಿಂದಿ ಭಾಷೆಯಲ್ಲಿ ಬಜೆಟ್‌ ಮಂಡಿಸುತ್ತಿದ್ದಾರೆ.

ರೈತರು ಅಧಿಕ ಉತ್ಪಾದನೆಗೆ ಒತ್ತು ನೀಡಲಾಗುವುದು. ಭಾರತೀಯ ಆರ್ಥಿಕತೆ 2018–19ನೇ ಸಾಲಿನ ದ್ವಿತಿಯಾರ್ಧದಲ್ಲಿ ಶೇ 7.2–7.5 ಬೆಳವಣಿಗೆ ಕಾಣಲಿದೆ ಎಂದರು.

ಆಹಾರ ಸಂಸ್ಕರಣೆಗೆ 1400 ಕೋಟಿ ಮೀಸಲು. ರೈತರು ಅಧಿಕ ಉತ್ಪಾದನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಕ್ರಮ, ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ವ್ಯಾಪ್ತಿ ವಿಸ್ತರಿಸಲಾಗುತ್ತದೆ.

* ಉಜ್ವಲ ಯೋಜನೆ ಮೂಲಕ 8 ಕೋಟಿ ಮಹಿಳೆಯರಿಗೆ ನೂತನ ಎಲ್‌ಪಿಜಿ ಸಂಪರ್ಕ

* ದೆಹಲಿ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ವಿಶೇಷ ಯೋಜನೆ

* ಕೃಷಿ ಚಟುವಟಿಕೆಗಳಿಗಾಗಿ ₹10 ಲಕ್ಷ ಕೋಟಿಯಿಂದ ₹11 ಲಕ್ಷ ಕೋಟಿಗೆ ಹೆಚ್ಚಳ

* ಶಿಕ್ಷಣ

– ಶಿಕ್ಷಕರಿಗೆ ಸಂಯೋಜಿತ ಬಿಇಡಿ ಕಾರ್ಯಕ್ರಮ
– ಕಪ್ಪು ಹಲಗೆಯಿಂದ ಡಿಜಿಟಲ್‌ ಬೋರ್ಡ್‌ ಕಡೆಗೆ
– ಸಂಶೋಧನಾ ವಲಯಕ್ಕಾಗಿ ₹1 ಲಕ್ಷ ಕೋಟಿ
– ವಡೋದರಾದಲ್ಲಿ ವಿಶೇಷ ರೈಲ್ವೆ ವಿಶ್ವವಿದ್ಯಾಲಯ
– 1 ಸಾವಿರ ಬಿಟೆಕ್‌ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಸರ್ಕಾರದಿಂದ ಅವಕಾಶ
– ಸರ್ವೇ ಭವಂತು ಸುಖಿನ: ಸರ್ವೇ ಸಂತು ನಿರಾಮಯ: ನಮ್ಮ ಸರ್ಕಾರದ ಬದ್ಧತೆ

ಪ್ರತಿಕ್ರಿಯಿಸಿ (+)