ಬುಧವಾರ, ಡಿಸೆಂಬರ್ 11, 2019
16 °C

ಸಾಮಾನ್ಯ ಜನರನ್ನು ಓಲೈಸಲು ಹಿಂದಿಯಲ್ಲಿ ಭಾಷಣ ಮಾಡಿದ ಅರುಣ್ ಜೇಟ್ಲಿ

Published:
Updated:
ಸಾಮಾನ್ಯ ಜನರನ್ನು ಓಲೈಸಲು ಹಿಂದಿಯಲ್ಲಿ ಭಾಷಣ ಮಾಡಿದ ಅರುಣ್ ಜೇಟ್ಲಿ

ನವದೆಹಲಿ: ದೇಶದ ಗ್ರಾಮೀಣ ಪ್ರದೇಶದ ಜನರನ್ನು ತಲುಪುವುದಕ್ಕಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಈ ಬಾರಿ ಹಿಂದಿಯಲ್ಲಿ ಬಜೆಟ್ ಭಾಷಣ ಮಾಡಿದ್ದಾರೆ.

ಸಾಮಾನ್ಯವಾಗಿ ಬಜೆಟ್ ಮಂಡನೆ ಮುನ್ನ ಹಣಕಾಸು ಸಚಿವರು ಮಾಡುವ ಭಾಷಣ ಇಂಗ್ಲಿಷ್‍ನಲ್ಲಿರುತ್ತದೆ. ಆದರೆ ಈ ಬಾರಿ ಸಾಮಾನ್ಯ ಜನರನ್ನು ಓಲೈಸುವುದಕ್ಕಾಗಿ ಸಚಿವರು ಕೆಲವು ಅಂಶಗಳನ್ನು ಇಂಗ್ಲಿಷ್‍ನಲ್ಲಿ ಹೇಳಿದ ನಂತರ ಅದನ್ನೇ ಹಿಂದಿಯಲ್ಲಿ ಹೇಳುವ ಮೂಲಕ ದ್ವಿಭಾಷೆಯಲ್ಲಿ ಸಂವಹನ ನಡೆಸಿದ್ದಾರೆ.

ಪ್ರತಿಕ್ರಿಯಿಸಿ (+)