ಚಾಮುಂಡಿಬೆಟ್ಟದ ಮಾರ್ಗದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ

7

ಚಾಮುಂಡಿಬೆಟ್ಟದ ಮಾರ್ಗದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ

Published:
Updated:

ಮೈಸೂರು: ನಗರದಲ್ಲಿ ಚಿರತೆ ಮತ್ತೆ ಕಾಣಿಸಿಕೊಳ್ಳುತ್ತಿದೆ. ಬುಧವಾರ ರಾತ್ರಿ ಚಾಮುಂಡಿಬೆಟ್ಟದ ಮಾರ್ಗದಲ್ಲಿ ಚಿರತೆ ನಡೆಯುತ್ತಿರುವ ವಿಡಿಯೊ ವೈರಲ್ ಆಗಿದೆ.

ರಸ್ತೆ ಮಧ್ಯದಲ್ಲಿ ಕುಳಿತ್ತಿದ್ದ ಚಿರತೆ ಕಾರು ಸಮೀಪಕ್ಕೆ ಬಂದ ನಂತರ ಎದ್ದು ನಿಧಾನವಾಗಿ ಹೆಜ್ಜೆ ಹಾಕುತ್ತಾ ರಸ್ತೆ ಬದಿಗೆ ಸರಿಯುತ್ತದೆ. ನಂತರ, ಒಂದೆರಡು ನಿಮಿಷಗಳಷ್ಟು ಕಾಲ ಮುಂದೆ ಸಾಗಿ ಮತ್ತೆ ಹಿಂದುರಿಗಿ ನೋಡಿ ಕಾಡಿನೊಳಗೆ ನುಸುಳುತ್ತದೆ.

ಎರಡು ದಿನಗಳ ಹಿಂದೆಯಷ್ಟೇ ಚಿರತೆ ಹಾಗೂ ಮುಳ್ಳುಹಂದಿಗಳು ಹೋಗುತ್ತಿದ್ದ ದೃಶ್ಯ ಗಾಲ್ಫ್‌ ಕ್ಲಬ್‌ ರಸ್ತೆಯಲ್ಲಿ ಸೆರೆಯಾಗಿತ್ತು. ನಂತರ, ಜೆ.ಪಿ.ನಗರದ ಅಪಾರ್ಟ್‌ಮೆಂಟ್‌ಗೆ ನುಗ್ಗಿ ನಾಯಿಯೊಂದರ ಮೇಲೆ ದಾಳಿ ನಡೆಸಿತ್ತು. ವಿಮಾನ ನಿಲ್ದಾಣದ ಸಿಸಿಟಿವಿಯಲ್ಲೂ ಚಿರತೆಯ ಚಲನವಲನಗಳು ಸೆರೆಯಾಗಿದ್ದವು. ಬುಧವಾರವಷ್ಟೇ ನಿಲ್ದಾಣದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕೂಬಿಂಗ್ ನಡೆಸಿ, ಬೋನು ಇರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry