ಬುಧವಾರ, ಡಿಸೆಂಬರ್ 11, 2019
24 °C

ಪರೀಕ್ಷಾ ಗೊಂದಲಕ್ಕೆ ಆಸ್ಪದ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರೀಕ್ಷಾ ಗೊಂದಲಕ್ಕೆ ಆಸ್ಪದ ಬೇಡ

ಕೋಲಾರ: ‘ಕರ್ನಾಟಕ ಲೋಕಸೇವಾ ಆಯೋಗವು ಫೆ.4ರಂದು ನಡೆಸುವ ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ಮತ್ತು ಫೆ.11ರಂದು ನಡೆಸುವ ದ್ವಿತೀಯ ದರ್ಜೆ ಸಹಾಯಕರ (ಎಸ್‌ಡಿಎ) ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದ ನೀಡಬಾರದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಸೂಚನೆ ನೀಡಿದರು.

ಪರೀಕ್ಷಾ ಪೂರ್ವಸಿದ್ಧತೆ ಕುರಿತು ನಗರದಲ್ಲಿ ಬುಧವಾರ ಸಭೆ ನಡೆಸಿ ಮಾತನಾಡಿ, ಈ ಬಾರಿ ಒಎಂಆರ್ ಪ್ರತಿಯು ವಿಶೇಷ ರೀತಿಯಲ್ಲಿ ಮುದ್ರಿತಗೊಂಡಿದ್ದು, ಅಭ್ಯರ್ಥಿಯ ನೋಂದಣಿ ಸಂಖ್ಯೆ, ಪ್ರಶ್ನೆಪತ್ರಿಕೆ ಶ್ರೇಣಿ ಸೇರಿದಂತೆ ಎಲ್ಲಾ ವಿವರಗಳು ಅದರಲ್ಲೇ ಇರುತ್ತವೆ ಎಂದರು.

ಉತ್ತರ ಪತ್ರಿಕೆಯಲ್ಲಿ ನಮೂದಿಸಿದ ಶ್ರೇಣಿಯ ಪ್ರಶ್ನೆಪತ್ರಿಕೆಯನ್ನೇ ಪರೀಕ್ಷಾರ್ಥಿಗಳಿಗೆ ನೀಡಬೇಕು. ಅಭ್ಯರ್ಥಿಗಳು ಪ್ರವೇಶಪತ್ರದೊಂದಿಗೆ ಆಧಾರ್ ಅಥವಾ ಮತದಾನದ ಗುರುತಿನ ಚೀಟಿ ಅಥವಾ ಚಾಲನಾ ಪರವಾನಗಿ ತರುವುದು ಕಡ್ಡಾಯ. ಗುರುತಿನ ಚೀಟಿ ಇಲ್ಲದಿದ್ದಲ್ಲಿ ಪರೀಕ್ಷೆ ಬರೆಯವುದಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಪರೀಕ್ಷಾ ಕೇಂದ್ರಗಳಿಗೆ ನಿಯೋಜನೆಗೊಂಡ ಸಿಬ್ಬಂದಿಯು ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆ ಬಾರದಂತೆ ಎಚ್ಚರಿಕೆ ವಹಿಸಬೇಕು. ಪರೀಕ್ಷಾ ಅಕ್ರಮಕ್ಕೆ ಅವಕಾಶ ನೀಡದೆ ಸುಸೂತ್ರವಾಗಿ ಪರೀಕ್ಷೆ ನಡೆಸಬೇಕು ಎಂದು ಸೂಚಿಸಿದರು.

ನಿಷೇಧಾಜ್ಞೆ ಜಾರಿ: ಪರೀಕ್ಷೆ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಪರೀಕ್ಷಾ ದಿನ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತದೆ. ಪರೀಕ್ಷಾ ಕೇಂದ್ರಗಳ ಹತ್ತಿರವಿರುವ ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಲಾಗಿದೆ ಎಂದು ವಿವರಿಸಿದರು.

ಅಭ್ಯರ್ಥಿಗಳು ಪರೀಕ್ಷಾ ಕೊಠಡಿಗೆ ಮೊಬೈಲ್, ಬ್ಲೂಟೂತ್ ಡಿವೈಸ್, ಪೇಜರ್‌, ವೈರ್‍ಲೆಸ್ ಸೆಟ್‌ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳು, ಬ್ಲೇಡ್‌, ಮಾರ್ಕರ್‌ ಹಾಗೂ ವೈಟ್‍ನರ್‌ ತರಬಾರದೆಂದು ಆದೇಶ ಹೊರಡಿಸಲಾಗಿದೆ. ಪರೀಕ್ಷಾ ಕಾರ್ಯಕ್ಕಾಗಿ 4 ಅಥವಾ 5 ಕೇಂದ್ರಗಳಿಗೆ ಒಬ್ಬರಂತೆ ಮಾರ್ಗಾಧಿಕಾರಿ ಮತ್ತು ವೀಕ್ಷಕರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಗರದ 23 ಕೇಂದ್ರಗಳಲ್ಲಿ ಎಫ್‌ಡಿಎ ಪರೀಕ್ಷೆ, ನಗರದ 24 ಹಾಗೂ ಕೆಜಿಎಫ್, ಬಂಗಾರಪೇಟೆಯ 17 ಕೇಂದ್ರಗಳಲ್ಲಿ ಎಫ್‌ಡಿಸಿ ಪರೀಕ್ಷೆ ನಡೆಯುತ್ತದೆ. ಜಾಗೃತದಳ ಮತ್ತು ಸ್ಥಾನಿಕ ಜಾಗೃತದಳ ನೇಮಕದ ಮೂಲಕ ಪರೀಕ್ಷೆ ಸುಗಮವಾಗಿ ನಡೆಯಲು ಕ್ರಮ ಕೈಗೊಳ್ಳಿ ಎಂದು ಹೇಳಿದರು.

ಅಂಚೆಯಲ್ಲಿ ಕಳುಹಿಸಿ: ಬೆಳಗಿನ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಅಂಚೆ ಮೂಲಕ ಮಧ್ಯಾಹ್ನ ಹಾಗೂ ಮಧ್ಯಾಹ್ನದ ಎರಡನೇ ಪತ್ರಿಕೆಯ ಉತ್ತರ ಪತ್ರಿಕೆಗಳನ್ನು ಅದೇ ದಿನ ಸಂಜೆ ಅಂಚೆ ಮೂಲಕ ಕಳುಹಿಸಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಇಕ್ಬಾಲ್ ಅಹಮ್ಮದ್‌ ಪಾಷಾ, ಬಿಇಒಗಳಾದ ರಘುನಾಥರೆಡ್ಡಿ, ಕೆಂಪರಾಮು, ಕೆಂಪಯ್ಯ, ಸುರೇಶ್, ಮಾಧವರೆಡ್ಡಿ ಪಾಲ್ಗೊಂಡಿದ್ದರು.

ನಿಷೇಧಾಜ್ಞೆ ಜಾರಿ

ಪರೀಕ್ಷೆ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಪರೀಕ್ಷಾ ದಿನ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತದೆ. ಪರೀಕ್ಷಾ ಕೇಂದ್ರಗಳ ಹತ್ತಿರವಿರುವ ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಲಾಗಿದೆ ಎಂದು ವಿವರಿಸಿದರು.

ಅಭ್ಯರ್ಥಿಗಳು ಪರೀಕ್ಷಾ ಕೊಠಡಿಗೆ ಮೊಬೈಲ್, ಬ್ಲೂಟೂತ್ ಡಿವೈಸ್, ಪೇಜರ್‌, ವೈರ್‍ಲೆಸ್ ಸೆಟ್‌ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳು, ಬ್ಲೇಡ್‌, ಮಾರ್ಕರ್‌ ಹಾಗೂ ವೈಟ್‍ನರ್‌ ತರಬಾರದೆಂದು ಆದೇಶ ಹೊರಡಿಸಲಾಗಿದೆ. ಪರೀಕ್ಷಾ ಕಾರ್ಯಕ್ಕಾಗಿ 4 ಅಥವಾ 5 ಕೇಂದ್ರಗಳಿಗೆ ಒಬ್ಬರಂತೆ ಮಾರ್ಗಾಧಿಕಾರಿ ಮತ್ತು ವೀಕ್ಷಕರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಗರದ 23 ಕೇಂದ್ರಗಳಲ್ಲಿ ಎಫ್‌ಡಿಎ ಪರೀಕ್ಷೆ, ನಗರದ 24 ಹಾಗೂ ಕೆಜಿಎಫ್, ಬಂಗಾರಪೇಟೆಯ 17 ಕೇಂದ್ರಗಳಲ್ಲಿ ಎಫ್‌ಡಿಸಿ ಪರೀಕ್ಷೆ ನಡೆಯುತ್ತದೆ. ಜಾಗೃತದಳ ಮತ್ತು ಸ್ಥಾನಿಕ ಜಾಗೃತದಳ ನೇಮಕದ ಮೂಲಕ ಪರೀಕ್ಷೆ ಸುಗಮವಾಗಿ ನಡೆಯಲು ಕ್ರಮ ಕೈಗೊಳ್ಳಿ ಎಂದು ಹೇಳಿದರು.

* * 

ಪರೀಕ್ಷಾ ಅಕ್ರಮಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಸಿ.ಸಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಯಾವುದೇ ದೂರು ಬಾರದಂತೆ ಅರ್ಹ, ಅನುಭವಿ ಉಪನ್ಯಾಸಕರು ಮತ್ತು ಶಿಕ್ಷಕರನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗುತ್ತದೆ.

–ಕೆ.ವಿದ್ಯಾಕುಮಾರಿ, ಹೆಚ್ಚುವರಿ ಜಿಲ್ಲಾಧಿಕಾರಿ

ಪ್ರತಿಕ್ರಿಯಿಸಿ (+)