ಭಾನುವಾರ, ಡಿಸೆಂಬರ್ 8, 2019
25 °C

ಸಮಾಜಕ್ಕೆ ಮಠಗಳ ಕೊಡುಗೆ ಅಪಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಾಜಕ್ಕೆ ಮಠಗಳ ಕೊಡುಗೆ ಅಪಾರ

ಚನ್ನಗಿರಿ: ಶತಮಾನಗಳಿಂದಲೂ ನಾಡಿನ ಮಠಮಾನ್ಯಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತ ಬಂದಿವೆ. ಸಮಾಜಕ್ಕೆ ಮಠಗಳ ಕೊಡುಗೆ ಅಪಾರಎಂದು ಶಾಸಕ ವಡ್ನಾಳ್ ರಾಜಣ್ಣ ಹೇಳಿದರು.

ಪಟ್ಟಣದ ಕೇದಾರ ಶಾಖಾಮಠದಲ್ಲಿ ಬುಧವಾರ ಕೇದಾರಲಿಂಗ ಶಿವ ಶಾಂತವೀರ ಶಿವಾಚಾರ್ಯ ಸ್ವಾಮೀಜಿಯ ಏಳನೇ ವರ್ಷದ ವರ್ಧಂತ್ಯುತ್ಸವ ಹಾಗೂ ಜನಜಾಗೃತಿ ಧರ್ಮ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಠ ಸಣ್ಣದಿರಲಿ, ದೊಡ್ಡದಿರಲಿ ಭಕ್ತರೇ ಮಠದ ನಿಜವಾದ ಆಸ್ತಿಯಾಗಿರುತ್ತಾರೆ. ಸಮಾಜವನ್ನು ಉತ್ತಮ ದಾರಿಯಲ್ಲಿ ಕೊಂಡೊಯ್ಯುವ ಸಾಮರ್ಥ್ಯ ಮಠಗಳಿಗೆ ಇರುತ್ತದೆ. ಮಠಗಳು ಧರ್ಮ, ಚಿಂತನೆ, ತತ್ವವನ್ನು ಭಕ್ತರಿಗೆ ಉಣಬಡಿಸುತ್ತಿವೆ. ₹ 3 ಲಕ್ಷ ಅನುದಾನದಲ್ಲಿ ಮಠದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಮಾತನಾಡಿ, ‘ಮಠಗಳು ಜಾಗೃತಿ ಮೂಡಿಸುವುದು ಅವಶ್ಯವಾಗಿದ್ದು, ಅರಿವಿನ ಕೇಂದ್ರಗಳಾಗಬೇಕು. ಇಂದು ಧರ್ಮ ಅಂಧಾನುಕರಣೆಗೆ ಒಳಗಾಗಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ. ಆದರೆ, ದಯೆಯ ತಳಹದಿಯ ಮೇಲೆ ಧರ್ಮ ಸಾಗಬೇಕಾಗಿದೆ ಎಂದರು.

ಕೊಟ್ಟೂರು ಕಟ್ಟೆಮನೆ ದೈವ ಹಿರೇಮಠದ ಯೋಗಿ ರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಗುರು, ಭೂಮಿ, ವಾಯು ಹಾಗೂ ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ. ಸದಾ ಒಳ್ಳೆಯ ವಿಚಾರ ಮಾತನಾಡಬೇಕು. ಕೆಟ್ಟದನ್ನು ಬಯಸುವ ಹಾಗೂ ಮಾಡುವ ಗುಣ ಇರಬಾರದು. ಕೊನೆಯುಸಿರಿವವರೆಗೂ ಪೋಷಕರನ್ನು ಪೋಷಿಸಬೇಕು. ಪರಂಪರೆ, ಸಂಪ್ರದಾಯ ಹಾಗೂ ಉತ್ತಮ ಸಂದೇಶವನ್ನು ಗುರುಗಳು ಸಮಾಜಕ್ಕೆ ನೀಡಬೇಕು ಎಂದರು.

ಮಾಜಿ ಶಾಸಕ ಮಹಿಮ ಪಟೇಲ್, ಪುರಸಭೆ ಸದಸ್ಯ ಬಿ.ಆರ್.ಹಾಲೇಶ್, ವೀರಶೈವ ಸಮಾಜದ ಅಧ್ಯಕ್ಷ ಎನ್.ವೈ.ರಾಜಶೇಖರಯ್ಯ, ಸಾಗರದ ಶಿವಲಿಂಗಪ್ಪ, ಟಿ.ಎಂ.ವಿ.ಓಂಕಾರನ್, ಬಸವರಾಜ ಕುಂಬಾರ್, ಶಿವಲಿಂಗಯ್ಯ, ಹಾಸ್ಯ ಕಲಾವಿದ ಜಗನ್ನಾಥ್‌, ಕೃಷ್ಣಮೂರ್ತಿ, ತಿಪ್ಪೇಸ್ವಾಮಿ, ಮೀನಾಕ್ಷಮ್ಮ, ಜ್ಯೋತಿ ಕೋರಿ ಉಪಸ್ಥಿತರಿದ್ದರು.

ಹಾರನಹಳ್ಳಿ ಜಕುಲಿ ಮಠದ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಹರಕೆರೆ ವಿರಕ್ತ ಮಠದ ಕರಿಸಿದ್ದೇಶ್ವರ ಸ್ವಾಮೀಜಿ ಸಮಾರಂಭದ ನೇತೃತ್ವ ವಹಿಸಿದ್ದರು. ಮಹಾಂತೇಶ್ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರತಿಕ್ರಿಯಿಸಿ (+)