ಲಕ್ಷ್ಮೀ ಗೋಲ್ಡ್ ಪ್ಯಾಲೇಸ್‌ ಮೇಲೆ ಐಟಿ ದಾಳಿ

7

ಲಕ್ಷ್ಮೀ ಗೋಲ್ಡ್ ಪ್ಯಾಲೇಸ್‌ ಮೇಲೆ ಐಟಿ ದಾಳಿ

Published:
Updated:

ಧಾರವಾಡ: ವಿಶ್ವಕರ್ಮ ಸಮಾಜದ ಮುಖಂಡ ಕೆ.ಪಿ. ನಂಜುಂಡಿ ಒಡೆತನದ ಲಕ್ಷ್ಮೀ ಗೋಲ್ಡ್‌ ಪ್ಯಾಲೇಸ್‌ನ ಧಾರವಾಡದ ಮಳಿಗೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು.

ಬೆಳಿಗ್ಗೆ ಸುಮಾರು 9 ಗಂಟೆಗೆ ಅಂಗಡಿ ತೆರೆಯುತ್ತಿದ್ದಂತೆ ಬಂದ ನಾಲ್ಕು ಅಧಿಕಾರಿಗಳು ಅಂಗಡಿ ಪ್ರವೇಶಿಸಿ ದಾಖಲೆ ತೋರಿಸುವಂತೆ ಅಲ್ಲಿನ ಸಿಬ್ಬಂದಿಗೆ ತಿಳಿಸಿದರು. ನಂತರ ಅಂಗಡಿಯ ಬಾಗಿಲು ಏಕಾ ಏಕಿ ಹಾಕಿದ್ದರಿಂದ ಸುತ್ತಮುತ್ತಲಿನ ಜನರು ಆಶ್ಚರ್ಯಚಕಿತರಾದರು. ಒಳಗಿದ್ದ ಸಿಬ್ಬಂದಿಯೂ ಕಕ್ಕಾಬಿಕ್ಕಿಯಾದರು. ಅವರೆಲ್ಲರನ್ನೂ ಒಂದೆಡೆ ಕೂರಿಸಿದ ಅಧಿಕಾರಿಗಳು ದಾಖಲೆ ಪರಿಶೀಲನೆ ಆರಂಭಿಸಿದರು.

ಸಂಜೆಯವರೆಗೂ ನಿರಂತರ ಪರಿಶೀಲನೆ ನಡೆಸಿದ ಅಧಿಕಾರಿಗಳು ದಾಳಿಯ ಯಾವುದೇ ಮಾಹಿತಿ ನೀಡಲು ನಿರಾಕರಿಸಿದರು. ಎಲ್ಲವನ್ನೂ ಬೆಂಗಳೂರಿನಿಂದ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry