ಶುಕ್ರವಾರ, ಡಿಸೆಂಬರ್ 6, 2019
25 °C

ಬಜೆಟ್‌ ಪರಿಣಾಮ: ಏರಿಳಿತದ ಹಾದಿಯಲ್ಲಿ ಷೇರುಪೇಟೆ

Published:
Updated:
ಬಜೆಟ್‌ ಪರಿಣಾಮ: ಏರಿಳಿತದ ಹಾದಿಯಲ್ಲಿ ಷೇರುಪೇಟೆ

ಮುಂಬೈ: ಕೇಂದ್ರ ಬಜೆಟ್‌ ಮಂಡನೆಯಾಗುತ್ತಿದ್ದಂತೆ ಷೇರುಪೇಟೆಯ ವಹಿವಾಟಿನಲ್ಲೂ ಏರಿಳಿತ ಉಂಟಾಗಿದೆ. ಬಜೆಟ್ ಮಂಡನೆ ವೇಳೆ, ಒಂದು ಹಂತದಲ್ಲಿ 330 ಅಂಶ ಕುಸಿದಿದ್ದ ನಿಫ್ಟಿ, ನಂತರ ಚೇತರಿಸಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ತುಸು ಏರಿಕೆ ದಾಖಲಿಸಿದೆ.

ಬಜೆಟ್‌ ಮಂಡನೆ ಆರಂಭವಾಗುವುದಕ್ಕೂ ಮುನ್ನ ಏರಿಕೆ ಕಂಡಿದ್ದ ನಿಫ್ಟಿ 11,078.50 ದಾಖಲಿಸಿತ್ತು. ಆದರೆ, ₹1 ಲಕ್ಷದವರೆಗಿನ ದೀರ್ಘಾವಧಿಯ ಬಂಡವಾಳ ಗಳಿಕೆ (ಎಲ್‌ಟಿಸಿಜಿ) ಮೇಲೆ ಬಜೆಟ್‌ನಲ್ಲಿ ಶೇ 10ರ ತೆರಿಗೆ ಘೋಷಿಸುತ್ತಿದ್ದಂತೆ ನಿಫ್ಟಿ ವಹಿವಾಟಿನಲ್ಲಿ ಕುಸಿತ ಕಂಡುಬಂದಿತು. 330 ಅಂಶ ಕುಸಿದಿದ್ದ ನಿಫ್ಟಿ 10,953 ತಲುಪಿತ್ತು. ಇದೀಗ (ಮಧ್ಯಾಹ್ನ 2.40ರ ವೇಳೆಗೆ) ನಿಫ್ಟಿ 3.05 ಅಂಶ ಏರಿಕೆ ಕಂಡಿದ್ದು, 11,030.75 ಆಗಿದೆ.

ಇನ್ನೊಂದೆಡೆ, ಬಜೆಟ್ ಮಂಡನೆಗೂ ಮುನ್ನ ಸೆನ್ಸೆಕ್ಸ್ 196.49 ಅಂಶ ಏರಿಕೆ ಕಂಡು 36,161.51ಕ್ಕೆ ತಲುಪಿತ್ತು. ಇದೀಗ (ಮಧ್ಯಾಹ್ನ 2.40ರ ವೇಳೆಗೆ) 22.08ರ ಏರಿಕೆಯೊಂದಿಗೆ 35,987.10 ಆಗಿದೆ.

ಪ್ರತಿಕ್ರಿಯಿಸಿ (+)