ಭಾನುವಾರ, ಡಿಸೆಂಬರ್ 8, 2019
25 °C

‘ವೀರಶೈವ ಎಂದಿಗೂ ಉಪಪಂಗಡವೇ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ವೀರಶೈವ ಎಂದಿಗೂ ಉಪಪಂಗಡವೇ’

ಬಳ್ಳಾರಿ: ‘ಲಿಂಗಾಯತ ಧರ್ಮದಲ್ಲಿರುವ 99 ಉಪ ಪಂಗಡಗಳ ಪೈಕಿ ವೀರಶೈವವೂ ಒಂದು. ಎಂದೆಂದಿಗೂ ವೀರಶೈವ ಒಂದು ಉಪ ಪಂಗಡವಷ್ಟೇ’ ಎಂದು ಲಿಂಗಾಯತ ಧರ್ಮ ಮಹಾಸಭೆಯ ರಾಜ್ಯ ಘಟಕದ ಅಧ್ಯಕ್ಷ ಚಂದ್ರಮೌಳಿ ಪ್ರತಿಪಾದಿಸಿದರು.

ನಗರದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಬಸವದಳ ಹಾಗೂ ಲಿಂಗಾಯತ ಧರ್ಮ ಮಹಾಸಭೆಯ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ‘ಲಿಂಗಾಯತ ಧರ್ಮದ ಹೋರಾಟ ಸಾಂವಿಧಾನಿಕ ಮಾನ್ಯತೆಗಾಗಿಯೇ ಹೊರತು ಯಾರದ್ದೋ ಸ್ವಾರ್ಥಕ್ಕೆ ಅಲ್ಲ’ ಎಂದರು.

‘ಲಿಂಗಾಯತ ಧರ್ಮದ ಹೋರಾಟದಲ್ಲಿ ಎಲ್ಲ ವಯೋಮಾನದವರೂ, ಜಾತಿ ಜನಾಂಗದವರು ಭಾಗವಹಿಸುತ್ತಿರುವುದು ಸತ್ಯದ ಗೆಲುವು. ಹೋರಾಟವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಜಿಲ್ಲಾ ಲಿಂಗಾಯತ ಧರ್ಮ ಮಹಾಸಭೆಯ ಉಪಾಧ್ಯಕ್ಷ ನೀಷ್ಠಿ ರುದ್ರಪ್ಪ ಅಭಿಪ್ರಾಯಪಟ್ಟರು.

ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷೆ ಶಾರದಾ, ಮಹಾಸಭೆಯ ರಾಜ್ಯ ಘಟಕದ ಗೌರವಾಧ್ಯಕ್ಷ ಕೆ.ಬಸವರಾಜ, ಉಪಾಧ್ಯಕ್ಷ ವೀರಣ್ಣ ಕೊಪ್ಪಳ, ಪ್ರಧಾನ ಸಂಘಟನಾ ಕಾರ್ಯದರ್ಶಿ ಈಶ್ವರ ಲಿಂಗಾಯತ್, ಬಸವ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ದಿಲೀಪ್, ಸಹ ಕಾರ್ಯದರ್ಶಿ ಪ್ರವೀಣ್, ಪ್ರಧಾನ ಕಾರ್ಯದರ್ಶಿ ಕೆ.ವಿ. ರವಿಶಂಕರ್ ಹಾಗೂ ಮಹಾಸಭೆಯ ಅಧ್ಯಕ್ಷ ಎಂ.ಆರ್.ಪಂಪನಗೌಡರ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)