ಖಾದರ್‌ಗೆ ಗುರುಬಸವ ಪುರಸ್ಕಾರ ಪ್ರದಾನ

7

ಖಾದರ್‌ಗೆ ಗುರುಬಸವ ಪುರಸ್ಕಾರ ಪ್ರದಾನ

Published:
Updated:

ಬೀದರ್‌: ಮೈಸೂರಿನ ಆಹಾರ ತಜ್ಞ ಡಾ.ಖಾದರ್ ಅವರಿಗೆ  ಮಂಗಳವಾರ ಇಲ್ಲಿಯ ಬಸವಗಿರಿಯಲ್ಲಿ ನಡೆಯುತ್ತಿರುವ ವಚನ ವಿಜಯೋತ್ಸವದ ಆಹಾರ ಪದ್ಧತಿ ಮತ್ತು ಜೀವನ ವಿಧಾನ ಗೋಷ್ಠಿಯಲ್ಲಿ ‘ಗುರುಬಸವ ಪುರಸ್ಕಾರ’ ಪ್ರದಾನ ಮಾಡಲಾಯಿತು.

ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ರಾಷ್ಟ್ರಮಟ್ಟದ ವಿಶೇಷ ಸಾಧಕರಿಗೆ ಕೊಡಲಾಗುವ ಪುರಸ್ಕಾರವು ₹ 51 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

‘ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆ ಹಾಗೂ ಸಿರಿಧಾನ್ಯಗಳ ಬಗೆಗೆ ಜಾಗೃತಿ ಮೂಡಿಸಿ ಕೇಂದ್ರ ಸರ್ಕಾರ 2018ನೇ ವರ್ಷವನ್ನು ಸಿರಿಧಾನ್ಯಗಳ ವರ್ಷ ಎಂದು ಘೋಷಿಸಲು ಕಾರಣರಾಗಿದ್ದನ್ನು ಪರಿಗಣಿಸಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ’ ಎಂದು ಬಸವ ಸೇವಾ

ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ತಿಳಿಸಿದರು. ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ. ಗಂಗಾಂಬಿಕೆ ಅಕ್ಕ, ಡಾ. ಸುರೇಶ ಪಾಟೀಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry