ಶುಕ್ರವಾರ, ಡಿಸೆಂಬರ್ 6, 2019
24 °C
ಅಚ್ಚರಿ

ದುಬಾರಿ ನೇಲ್‌ಪಾಲಿಶ್‌

Published:
Updated:
ದುಬಾರಿ ನೇಲ್‌ಪಾಲಿಶ್‌

ಫ್ಯಾಷನೆಬಲ್‌ ಜೀವನಶೈಲಿಯನ್ನು ಅಪ್ಪಿಕೊಳ್ಳುತ್ತಿರುವ ಕಾಲ ಇದು. ಫೋನ್‌, ದಿರಿಸು, ಬ್ಯಾಗ್‌, ಮನೆ ಎಲ್ಲವೂ ದುಬಾರಿ ಬೆಲೆಯದ್ದೇ ಆಗಬೇಕು, ವೈಭವೋಪೇತವಾಗಿ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಬೆಲೆ ಎಷ್ಟೇ ಆದರೂ ಆಲಂಕಾರಿಕ ವಸ್ತುಗಳಿಗಾಗಿ ಸಾಕಷ್ಟು ಖರ್ಚು ಮಾಡುವ ಜನರಿದ್ದಾರೆ. ಅಂಥವರಿಗಾಗಿಯೆಂದೇ ಬಂದಿದೆ ಸುಮಾರು (250,000 ಡಾಲರ್‌) ಒಂದು ಕೋಟಿ 63 ಲಕ್ಷದ 66 ಸಾವಿರ ರೂಪಾಯಿಯ ನೇಲ್‌ ಪಾಲಿಶ್‌!

ಲಾಸ್‌ ಏಂಜಲೀಸ್‌ನ ಪ್ರತಿಷ್ಠಿತ ಜ್ಯುವೆಲ್ಲರ್‌ ಎಂದೇ ಹೆಸರು ಗಳಿಸಿರುವ ಅಜಾಚ್ಯೂರ್‌ ಇಂಥದ್ದೊಂದು ನೇಲ್‌ ಪಾಲಿಶ್‌ ಪರಿಚಯಿಸಿದ್ದು, ಅದರಲ್ಲಿ 267 ಕ್ಯಾರೆಟ್‌ನ ಕಪ್ಪು ವಜ್ರವಿದೆಯಂತೆ. ಇದೇ ನೇಲ್‌ ಪಾಲಿಶ್‌ ಬೆಲೆ ದುಬಾರಿ ಆಗುವುದಕ್ಕೆ ಕಾರಣ.

‌ಅತ್ಯದ್ಭುತ ಆಭರಣಗಳಿಗಾಗಿಯೇ ಹೆಸರಾಗಿರುವ ಈ ಕಂಪನಿ ನೇಲ್ ಪಾಲಿಶ್‌ನಲ್ಲಿಯೂ ಈ ಹೊಸ ಪ್ರಯೋಗ ಮಾಡಿದೆ. ಮೆನಿಕ್ಯೂರ್‌ಗಾಗಿಯೂ ಪ್ರಪಂಚದಲ್ಲಿ ಸಾಕಷ್ಟು ಹಣ ಖರ್ಚು ಮಾಡುವವರಿದ್ದಾರೆ.

ಅಂದಾಜಿನ ಪ್ರಕಾರ ಒಬ್ಬರು ಒಂದು ಉಗುರಿಗೆ ಸುಮಾರು 2ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ. ಉಗುರಿಗಾಗಿ ಇಷ್ಟೆಲ್ಲಾ ಖರ್ಚು ಮಾಡುವವರು ನೇಲ್‌ ಪಾಲಿಶ್‌ಗಾಗಿ ದುಡ್ಡು ಖರ್ಚು ಮಾಡುವುದಿಲ್ಲವೇ ಎಂದೂ ಕಂಪನಿ ಪ್ರಶ್ನಿಸಿದೆ. ಅಂದಹಾಗೆ ಆನ್‌ಲೈನ್‌ನಲ್ಲಿ ನೇಲ್‌ ಪಾಲಿಶ್‌ ಲಭ್ಯವಿದ್ದು, ಈಗಾಗಲೇ ಸ್ಟಾಕ್‌ ಖಾಲಿಯಾಗಿದೆಯಂತೆ. ಬಣ್ಣ ವೈವಿಧ್ಯದಲ್ಲಿಯೂ ಇವು ಲಭ್ಯ.

ಪ್ರತಿಕ್ರಿಯಿಸಿ (+)